ಸ್ಟಾರ್ ನಟಿಯ ಬದಲಿಗೆ ರುಕ್ಮಿಣಿ ವಸಂತ್​ಗೆ ತಮಿಳು ಸಿನಿಮಾದಲ್ಲಿ ಅವಕಾಶ

16 Feb 2024

Author : Manjunatha

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ನಟಿ ರುಕ್ಮಿಣಿ ವಸಂತ್​ ಗೆ ಅವಕಾಶಗಳ ಸುರಿಮಳೆಯಾಗುತ್ತಿದೆ.

ಸಪ್ತ ಸಾಗರದಾಚೆ ಎಲ್ಲೋ

ಕನ್ನಡ ಮಾತ್ರವೇ ಅಲ್ಲದೆ ಪರಭಾಷೆಗಳಿಂದಲೂ ಹಲವು ಅವಕಾಶಗಳು ರುಕ್ಮಿಣಿ ವಸಂತ್ ಅವರನ್ನು ಅರಸಿ ಬರುತ್ತಿವೆ.

ಪರಭಾಷೆಗಳಿಂದ ಅವಕಾಶ

ಈಗಾಗಲೇ ನಟ ವಿಜಯ್ ಸೇತುಪತಿ ಜೊತೆಗೆ ಹೊಸದೊಂದು ತಮಿಳು ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.

ವಿಜಯ್ ಸೇತುಪತಿ ಜೊತೆ

ಇದೀಗ ಜನಪ್ರಿಯ ನಟಿಯೊಬ್ಬರು ಆಯ್ಕೆ ಆಗಿದ್ದ ಪಾತ್ರಕ್ಕೆ ರುಕ್ಮಿಣಿ ವಸಂತ್ ಅವರನ್ನು ತಮಿಳು ಚಿತ್ರತಂಡ ಆಯ್ಕೆ ಮಾಡಿದ್ದು ಮುಹೂರ್ತವೂ ನಡೆದಿದೆ.

ರುಕ್ಮಿಣಿ ವಸಂತ್ ಸಿನಿಮಾ

ತಮಿಳು ನಟ ಶಿವಕಾರ್ತಿಕೇಯನ್ ನಟಿಸಲಿರುವ ಹೊಸ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿದ್ದು, ಈ ಸಿನಿಮಾದ ಮುಹೂರ್ತ ಇಂದಷ್ಟೆ ನಡೆದಿದೆ.

ನಟ ಶಿವಕಾರ್ತಿಕೇಯನ್

‘ಗಜಿನಿ’, ‘ಕತ್ತಿ’, ‘7 ಸೆನ್ಸ್’, ‘ಸ್ಟಾಲಿನ್’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಎಆರ್ ಮುರುಗದಾಸ್ ಈ ಸಿನಿಮಾದ ನಿರ್ದೇಶಕ.

ಸೂಪರ್ ಹಿಟ್ ಸಿನಿಮಾ

ರುಕ್ಮಿಣಿ ವಸಂತ್ ನಿರ್ವಹಿಸುತ್ತಿರುವ ನಾಯಕಿ ಪಾತ್ರಕ್ಕೆ ಈ ಮೊದಲು ಮೃಣಾಲ್ ಠಾಕೂರ್ ಅವರನ್ನು ಆರಿಸಲಾಗಿತ್ತಂತೆ. ಅವರ ಬದಲು ರುಕ್ಮಿಣಿ ಅವರನ್ನು ಆಯ್ಕೆ ಮಾಡಲಾಗಿದೆ.

ಮೃಣಾಲ್ ಠಾಕೂರ್

ರುಕ್ಮಿಣಿ ವಸಂತ್ ಶ್ರೀಮುರಳಿ ಜೊತೆ ನಟಿಸಿರು ‘ಬಘೀರ’ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಶಿವಣ್ಣನ ಜೊತೆ ‘ಭೈರತಿ ರಣಗಲ್’ ಸಿನಿಮಾದಲ್ಲಿಯೂ ರುಕ್ಮಿಣಿ ನಟಿಸುತ್ತಿದ್ದಾರೆ.

‘ಬಘೀರ’ ಸಿನಿಮಾ

ರುಕ್ಮಿಣಿ ವಸಂತ್ ವಿಜಯ್ ದೇವರಕೊಂಡ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಹರಿದಾಡಿತ್ತು, ಆದರೆ ಸುಳ್ಳೆಂದು ರುಕ್ಮಿಣಿ ಹೇಳಿದರು.

ವಿಜಯ್ ದೇವರಕೊಂಡ

ಫಿಲ್ಟರ್ ಇಲ್ಲದೆ ಮಾತನಾಡಲಿದ್ದಾರೆ ರಶ್ಮಿಕಾ ಮಂದಣ್ಣ, ಬಯಲಾಗಲಿವೆ ಹಲವು ಗುಟ್ಟುಗಳು