ನಟಿ ಸಾಯಿ ಪಲ್ಲವಿಗೆ ಇದೆ ಅದೊಂದು ಮಹತ್ತರ ಆಸೆ
08 Mar 2025
Manjunatha
ಸಾಯಿ ಪಲ್ಲವಿ ಭಾರತದ ಟಾಪ್ ನಟಿಯರಲ್ಲಿ ಒಬ್ಬರು, ಇತರೆ ನಟಿಯರಿಗಿಂತಲೂ ಬಹಳ ಭಿನ್ನ ಹಾದಿಯಲ್ಲಿ ಹಿಡಿದು ಯಶಸ್ಸು ಗಳಿಸಿದ್ದಾರೆ ಈ ನಟಿ.
ನಟಿ ಸಾಯಿ ಪಲ್ಲವಿ
ಗ್ಲಾಮರ್ ರಹಿತ, ನಟನೆಗೆ ಅವಕಾಶ ಇರುವ ಪಾತ್ರಗಳನ್ನು ಮಾತ್ರವೇ ಒಪ್ಪಿಕೊಳ್ಳುವ ನಟಿ ಸಾಯಿ ಪಲ್ಲವಿ, ಇದೇ ಕಾರಣಕ್ಕೆ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.
ಗ್ಲಾಮರ್ ರಹಿತ ಪಾತ್ರ
ಸಾಯಿ ಪಲ್ಲವಿ ನಟಿಸಿರುವ ಸಿನಿಮಾಗಳೆಲ್ಲ ಅವರ ನಟನೆ ಬಹಳ ಪ್ರಶಂಸೆಗೆ ಪಾತ್ರವಾಗಿದೆ. ಅವರ ನಟನೆ, ಡ್ಯಾನ್ಸ್ಗೆ ಸರಿಸಾಟಿ ಯಾರೂ ಇಲ್ಲ.
ಪ್ರಶಂಸೆಗೆ ಪಾತ್ರವಾಗಿದೆ
ಅದ್ಭುತ ನಟಿಯಾಗಿರುವ ಸಾಯಿ ಪಲ್ಲವಿ ಕೈಯಲ್ಲಿ ಈಗ ಒಂದರ ಹಿಂದೊಂದು ದೊಡ್ಡ ಸಿನಿಮಾ ಆಫರ್ಗಳಿವೆ. ಆದರೆ ನಟಿಗೆ ಒಂದು ಕೊರತೆ ಕಾಡುತ್ತಿದೆ.
ದೊಡ್ಡ ಆಫರ್ಗಳಿವೆ
ಸಾಯಿ ಪಲ್ಲವಿಗೆ ರಾಷ್ಟ್ರಪ್ರಶಸ್ತಿ ಗೆಲ್ಲಬೇಕು ಎಂಬ ಆಸೆ ಬಹಳ ಇದೆಯಂತೆ. ಇದಕ್ಕಾಗಿ ಪ್ರತಿ ಸಿನಿಮಾದಲ್ಲಿಯೂ ಕಷ್ಟ ಪಡುತ್ತಿದ್ದಾರಂತೆ.
ರಾಷ್ಟ್ರಪ್ರಶಸ್ತಿ ಗೆಲ್ಲುವಾಸೆ
ರಾಷ್ಟ್ರಪ್ರಶಸ್ತಿ ಗೆದ್ದಾಗ ಅವರ ಅಜ್ಜಿ ತನಗೆ ಉಡುಗೊರೆಯಾಗಿ ಕೊಟ್ಟಿರುವ ಸೀರೆಯನ್ನು ಉಟ್ಟುಕೊಂಡು ಹೋಗಬೇಕು ಎಂಬುದು ಅವರ ಆಸೆಯಂತೆ.
ಅಜ್ಜಿ ಕೊಟ್ಟ ಸೀರೆ
ಈ ವರ್ಷ ಅವರ ‘ಅಮರನ್’ ಸಿನಿಮಾಕ್ಕೆ ಸಾಯಿ ಪಲ್ಲವಿಗೆ ರಾಷ್ಟ್ರಪ್ರಶಸ್ತಿ ಸಿಗಬಹುದು, ಅದ್ಭುತವಾಗಿ ನಟಿಸಿದ್ದಾರೆ ಸಾಯಿ ಪಲ್ಲವಿ.
ಈ ಬಾರಿ ಸಿಗಬಹುದು
ತೆಲುಗು ಸಿನಿಮಾ ವೇದಿಕೆಯಲ್ಲಿ ಪತ್ರಕರ್ತರೊಡನೆ ಜಗಳ ಮಾಡಿದ ಬಾಲಿವುಡ್ ನಟಿ
Learn more