ಆಸ್ಪತ್ರೆಗೆ ದಾಖಲಾದ ಸೈಫ್ ಅಲಿ ಖಾನ್, ‘ದೇವರ’ ಸಿನಿಮಾ ಶೂಟಿಂಗ್​ನಲ್ಲಿ ಆಯ್ತಾ ಅಪಘಾತ?

22 Jan 2024

Author : Manjunatha

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮುಂಬೈನ ಕೋಕಿಲಾ ಬೇನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟ ಸೈಫ್ ಅಲಿ ಖಾನ್

ಅವರು ಮೊಣಕಾಲು ನೋವು ಹಾಗೂ ಭುಜನ ನೋವಿನಿಂದ ಬಳಲುತ್ತಿದ್ದು, ಕೋಕಿಲಾ ಬೇನ್ ಆಸ್ಪತ್ರೆಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. 

ಮೊಣಕಾಲು ನೋವು

ತೆಲುಗಿನ ‘ದೇವರ’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದು, ಸಿನಿಮಾದ ಶೂಟಿಂಗ್​ನಲ್ಲಿ ಆದ ಅವಘಡದಿಂದಲೇ ಅವರ ಕಾಲಿಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ.

ಶೂಟಿಂಗ್​ನಲ್ಲಿ ಅವಘಡ

ಆದರೆ ಈ ವರೆಗೂ ‘ದೇವರ’ ಚಿತ್ರತಂಡವಾಗಲಿ, ಸೈಫ್ ಅಲಿ ಖಾನ್ ಆಗಲಿ ಈ ಬಗ್ಗೆ ಮಾತನಾಡಿಲ್ಲ.

ಸ್ಪಷ್ಟತೆ ನೀಡಿಲ್ಲ 

‘ದೇವರ’ ಸೈಫ್ ಅಲಿ ಖಾನ್ ನಟಿಸುತ್ತಿರುವ ಮೊಟ್ಟ ಮೊದಲ ದಕ್ಷಿಣ ಭಾರತದ ಸಿನಿಮಾ. ಅವರು ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ.

ದಕ್ಷಿಣ ಭಾರತದ ಸಿನಿಮಾ

ಸಂಜಯ್ ದತ್ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದ ಬಾಲಿವುಡ್​ನ ಸ್ಟಾರ್ ನಟ ಸೈಫ್ ಅಲಿ ಖಾನ್.

ಬಾಲಿವುಡ್​ನ ಸ್ಟಾರ್ ನಟ

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದಲ್ಲಿ ಸೈಫ್ ನಟಿಸಿದ್ದರಾದರೂ ಅದನ್ನು ನಿರ್ಮಿಸಿದ್ದು, ನಿರ್ದೇಶಿಸಿದ್ದು ಬಾಲಿವುಡ್​ನವರೇ ಆಗಿದ್ದರು.

‘ಆದಿಪುರುಷ್’ ಸಿನಿಮಾ

‘ದೇವರ’ ಸಿನಿಮಾ ಮಾತ್ರವೇ ಅಲ್ಲದೆ ಕೆಲವು ಬಾಲಿವುಡ್ ಸಿನಿಮಾಗಳಲ್ಲಿಯೂ ಸಹ ಸೈಪ್ ಬ್ಯುಸಿಯಾಗಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸಿನಿಮಾ ಸೆಲೆಬ್ರಿಟಿಗಳು ಇವರು