ವಿಶ್ವಕಪ್​ನಿಂದ ‘ಟೈಗರ್ 3’ ಕಲೆಕ್ಷನ್​ಗೆ ಹೊಡೆತ ಬಿತ್ತೆ? ಸಲ್ಮಾನ್ ಹೇಳಿದ್ದು ಹೀಗೆ

18 NOV 2023

‘ಟೈಗರ್ 3’ ಸಿನಿಮಾ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದು, ನಿರೀಕ್ಷೆಗೆ ತಕ್ಕಂತೆ ಕಲೆಕ್ಷನ್ ಆಗುತ್ತಿಲ್ಲ.

ಕಲೆಕ್ಷನ್ ಆಗುತ್ತಿಲ್ಲ

ವಿಶ್ವಕಪ್ ಪಂದ್ಯಾವಳಿ ನಡೆಯುವ ಸಮಯದಲ್ಲಿ ‘ಟೈಗರ್ 3’ ಸಿನಿಮಾ ಬಿಡುಗಡೆ ಆದ ಕಾರಣಕ್ಕೆ ಸಿನಿಮಾ ಕಲೆಕ್ಷನ್ ಗೆ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ.

ಕಲೆಕ್ಷನ್ ಗೆ ಹೊಡೆತ

ಈ ಬಗ್ಗೆ ಪ್ರತಿಕ್ರಿಯೆ ನಟ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು, ‘ಟೈಗರ್ 3’ ಸಿನಿಮಾದ ಕಲೆಕ್ಷನ್ ಚೆನ್ನಾಗಿಯೇ ಇದೆ ಎಂದಿದ್ದಾರೆ.

ಸಲ್ಮಾನ್ ಮಾತು

ಭಾರತವು ಒಂದರ ಹಿಂದೊಂದು ಮ್ಯಾಚ್​ಗಳನ್ನು ಗೆಲ್ಲುವ ಸಂದರ್ಭದಲ್ಲಿ ನಾವು ‘ಟೈಗರ್ 3’ ಸಿನಿಮಾ ಬಿಡುಗಡೆ ಮಾಡಿದೆವು ಎಂದಿದ್ದಾರೆ ಸಲ್ಮಾನ್.

ಸಲ್ಮಾನ್ ಹೇಳಿಕೆ

ದೇವರ ದಯೆಯಿಂದ ಫೈನಲ್​ನಲ್ಲಿ ಸಹ ನಮ್ಮ ಇಂಡಿಯಾ ಗೆಲ್ಲಲಿದೆ, ಆ ನಂತರ ಎಲ್ಲರೂ ಮತ್ತೆ ಚಿತ್ರಮಂದಿರಗಳಿಗೆ ಬನ್ನಿ ಎಂದು ಸಲ್ಮಾನ್ ಹೇಳಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್, ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಶ್ಮಿ ನಟಿಸಿರುವ ‘ಟೈಗರ್ 3’ ಸಿನಿಮಾ ನವೆಂಬರ್ 12 ಕ್ಕೆ ಬಿಡುಗಡೆ ಆಗಿದೆ.

ನವೆಂಬರ್ 12 

ಸಲ್ಮಾನ್ ಖಾನ್​ರ ‘ಟೈಗರ್ 3’ ಆರು ದಿನಕ್ಕೆ ಸುಮಾರು 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

‘ಟೈಗರ್ 3’ ಕಲೆಕ್ಷನ್

ಸಲ್ಮಾನ್ ಖಾನ್​ರ ‘ಟೈಗರ್ 3’ ಸಿನಿಮಾದ ಕಲೆಕ್ಷನ್ ದಿನೇ-ದಿನೇ ಇಳಿಕೆ ಆಗುತ್ತಿದೆ ಅನ್ನಿಸುತ್ತಿದೆ. ವಿಶ್ವಕಪ್ ಮುಗಿದ ಮೇಲೆ ಕಲೆಕ್ಷನ್ ಹೆಚ್ಚಾಗುತ್ತದೆಯೇ ನೋಡಬೇಕು.

ಕಲೆಕ್ಷನ್ ಇಳಿಕೆ

ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್