ಬದಲಾಗಲ್ಲ ಸಮಂತಾ ನಿರ್ಣಯ, ಅಭಿಮಾನಿಗಳಿಗೆ ನಿರಾಸೆ

ಸಮಂತಾರ ಹೊಸ ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಆ ಕಾಯುವಿಕೆ ಬೇಗ ಮುಗಿಯುವಂತೆ ಕಾಣುತ್ತಿಲ್ಲ.

25 Jan 2024

TV9 Kannada Logo For Webstory First Slide

Author : Manjunatha

ನಟಿ ಸಮಂತಾ ಸಿನಿಮಾ, ವೆಬ್ ಸರಣಿಗಳಿಂದ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಪ್ರಸ್ತುತ ಅವರು ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದಾರೆ.

ಬ್ರೇಕ್ ತೆಗೆದುಕೊಂಡಿದ್ದಾರೆ

’ಸಿಟಾಡೆಲ್’ ಚಿತ್ರೀಕರಣ ಮುಗಿಸಿದ ಸಮಂತಾ ಅದಾದ ಬಳಿಕ ಇನ್ಯಾವುದೇ ಹೊಸ ಸಿನಿಮಾ ಅಥವಾ ವೆಬ್ ಸರಣಿ ಒಪ್ಪಿಕೊಂಡಿಲ್ಲ.

’ಸಿಟಾಡೆಲ್’ ಚಿತ್ರೀಕರಣ

ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಳ್ಳಲೇ ಬೇಕು ಎಂಬ ಕಾರಣಕ್ಕೆ ಕೈಯಲ್ಲಿದ್ದ ಕೆಲವು ಸಿನಿಮಾಗಳನ್ನು ಸಹ ಸಮಂತಾ ಕೈಬಿಟ್ಟಿದ್ದಾರೆ.

ಚಿತ್ರೀಕರಣದಿಂದ ಬ್ರೇಕ್

ಕೆಲವೇ ತಿಂಗಳಲ್ಲಿ ಸಮಂತಾ ಸೆಟ್​ಗೆ ಮರಳುತ್ತಾರೆ, ಹೊಸ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು, ಅವರಿಗೆ ನಿರಾಸೆಯಾಗಿದೆ.

ಕಾಯುತ್ತಿದ್ದ ಅಭಿಮಾನಿ 

ಸಮಂತಾ ಕನಿಷ್ಟ ಒಂದು ವರ್ಷ ಸಿನಿಮಾ ಚಿತ್ರೀಕರಣದಿಂದ ದೂರ ಉಳಿಯಲು ನಿಶ್ಚಯ ಮಾಡಿದ್ದಾರೆ. ಅದನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತಿದ್ದಾರೆ.

ನಿಶ್ಚಯ ಮಾಡಿದ್ದಾರೆ

ಕೇವಲ ಇನ್​ಸ್ಟಾಗ್ರಾಂನಲ್ಲಿ ಮಾತ್ರವೇ ಸಮಂತಾ ಸಕ್ರಿಯವಾಗಿದ್ದು, ಆಗಾಗ್ಗೆ ಪ್ರೊಮೋಷನಲ್​ ಫೋಟೊಶೂಟ್ ಮಾಡಿಸಿ ಸಂಪಾದನೆ ಮಾಡುತ್ತಿದ್ದಾರೆ.

ಪ್ರೊಮೋಷನಲ್​ ಪೋಸ್ಟ್

ಸಮಂತಾರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು, ಆರೋಗ್ಯ ಸಮಸ್ಯೆಯ ನಡುವೆಯೂ ಸಮಂತಾ ಚಿತ್ರೀಕರಣಗಳಲ್ಲಿ ಭಾಗವಹಿಸಿದ್ದರು.

ಆರೋಗ್ಯ ಹದಗೆಟ್ಟಿತ್ತು

ಆದರೆ ಈಗ ಚಿತ್ರೀಕರಣಕ್ಕೆ ಬಿಡುವು ನೀಡಿ ಆರೋಗ್ಯ ಸುಧಾರಣೆ ಕಡೆಗೆ ಗಮನ ಹರಿಸಿದ್ದಾರೆ. ದಿನದ ಬಹುತೇಕ ಸಮಯವನ್ನು ಆರೋಗ್ಯ ಸುಧಾರಣೆಗೆ ನಿಗದಿಪಡಿಸಿದ್ದಾರೆ.

ಆರೋಗ್ಯ ಸುಧಾರಣೆ

ಜೊತೆಗೆ ವಿಶ್ವಪರ್ಯಟನೆಯನ್ನೂ ಸಹ ಮಾಡುತ್ತಿದ್ದಾರೆ. ಗೆಳೆಯರೊಟ್ಟಿಗೆ ಸೇರಿಕೊಂಡು ವಿವಿಧ ದೇಶಗಳ ಪ್ರವಾಸವನ್ನೂ ಸಹ ಸಮಂತಾ ಮಾಡುತ್ತಿದ್ದಾರೆ.

ಗೆಳೆಯರೊಟ್ಟಿಗೆ ಪ್ರವಾಸ

ಮದುವೆ ಬಳಿಕ ವೃತ್ತಿ ಬದಲಿಸಿದ ನಟಿ ಪರಿಣೀತಿ ಚೋಪ್ರಾ, ಇನ್ನು ಮುಂದೆ ಸಂಗೀತಗಾರ್ತಿ