ನಟಿ ಸಮಂತಾ, ತಮ್ಮ ಅಭಿಮಾನಿಯೊಬ್ಬರು ಮಾಡಿರುವ ಸಾಧನೆಯನ್ನು ಹೆಮ್ಮೆಯಿಂದ ಶೇರ್ ಮಾಡಿದ್ದಾರೆ.

21 May 2024

Author : Manjunatha

ಅಭಿಮಾನಿಗಳು ತಮಗಾಗಿ ಹಾಕಿದ ಕಟೌಟ್, ಹಾಕಿಸಿಕೊಂಡ ಹಚ್ಚೆ, ಗಾಡಿಯ ಮೇಲೆ ಹಾಕಿಸಿಕೊಂಡ ಚಿತ್ರಗಳ ಫೋಟೊಗಳನ್ನು ಸ್ಟಾರ್ ನಟ-ನಟಿಯರು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

ಸ್ಟಾರ್ ನಟ-ನಟಿಯರು

ಸಮಂತಾ, ತಮ್ಮ ಅಭಿಮಾನಿ ಮಾಡಿದ ಸಾಧನೆಯನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ. 

ಅಭಿಮಾನಿಯ  ಸಾಧನೆ

ಬೇರೆಯವರಿಗೆ ಮಾದರಿಯಾಗಲೆಂದು ಸಮಂತಾ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. 

ಸಮಂತಾ ಇನ್​ಸ್ಟಾಗ್ರಾಂ

ಸಮಂತಾರ ಅಭಿಮಾನಿ ಅಮೃಷಾ ಎಂಬುವರು ತೆಲಂಗಾಣದ ಎಮ್​ಸೆಟ್ (ಇಂಜಿನೀರಿಂಗ್ ಅಗ್ರಿಕಲ್ಚರ್ ಆಂಡ್ ಫಾರ್ಮಸಿ ಕಾಮನ್ ಎಂಟ್ರೆನ್ಸ್ ಟೆಸ್ಟ್​) ಪರೀಕ್ಷೆ ಎದುರಿಸಿ ಪಾಸ್ ಆಗಿದ್ದಾರೆ. 

 ಅಭಿಮಾನಿ ಅಮೃಷಾ

ಪಾಸ್ ಆಗಿ ಅಂಕಪಟ್ಟಿಯನ್ನು ಸಮಂತಾಗೆ ತೋರಿಸಿ ಶುಭ ಹಾರೈಕೆಗಳನ್ನು ಸಹ ಪಡೆದಿದ್ದಾರೆ. 

ಸಮಂತಾ ಶುಭ ಹಾರೈಕೆ

ಅಮೃಷಾ ತಮ್ಮನ್ನು ಅಪ್ಪಿಕೊಂಡಿರುವ ಸುಂದರವಾದ ಚಿತ್ರವನ್ನು ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ

ಸಮಂತಾ ತಮ್ಮ ಸಿನಿಮಾಗಳ ಮೂಲಕ ಮಾತ್ರವೇ ಅಲ್ಲದೆ, ಫಿಟ್​ನೆಸ್, ಬದುಕನ್ನು ಗಟ್ಟಿತನದಿಂದ ಎದುರಿಸುವ ರೀತಿಯಿಂದ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

     ಹಲವರಿಗೆ ಸ್ಪೂರ್ತಿ

ಹಲವು ಯುವತಿಯರು, ಮಹಿಳೆಯರು ಸಮಂತಾರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಗಟ್ಟಿತನದಿಂದ ಬದುಕನ್ನು ಎದುರಿಸಿ ಬೆಳೆಯುತ್ತಿದ್ದಾರೆ.

ಮಹಿಳೆಯರಿಗೆ ಸ್ಪೂರ್ತಿ

ಚಿತ್ರರಂಗದಿಂದ ಬಿಡುವು ಪಡೆದಿದ್ದ ಸಮಂತಾ ಇದೀಗ ಮತ್ತೆ ಸಿನಿಮಾಕ್ಕೆ ಎಂಟ್ರಿ ನೀಡಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಸ್ಯಾಮ್ ನಟಿಸುತ್ತಿದ್ದಾರೆ.

ಚಿತ್ರರಂಗದಿಂದ ಬಿಡುವು

ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿಯ ಈ ಕೇಸರಿ ಉಡುಪಿನ ಬೆಲೆ ಸಾವಿರಗಳಲ್ಲ, ಲಕ್ಷಗಳು