ರಾಮ್ ಚರಣ್ ಜೊತೆ ಮತ್ತೊಂದು ಸಿನಿಮಾ ಬೇಡಿಕೆಗೆ ಸಮಂತಾ ಹೇಳಿದ್ದೇನು?
25 Mar 2025
Manjunatha
ಸಮಂತಾ ಋತ್ ಪ್ರಭು ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ಭಾಷೆಗಳಲ್ಲಿ ಅವರು ನಟಿಸುತ್ತಿದ್ದಾರೆ.
ಸಮಂತಾ ಋತ್ ಪ್ರಭು
ವಿಶೇಷವಾಗಿ ಬಾಲಿವುಡ್ನಲ್ಲಿ ಒಂದರ ಹಿಂದೊಂದು ಅವಕಾಶಗಳನ್ನು ಸಮಂತಾ ಬಾಚಿಕೊಳ್ಳುತ್ತಿದ್ದಾರೆ.
ಬಾಚಿಕೊಳ್ಳುತ್ತಿದ್ದಾರೆ
ಆದರೆ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದಂತಿದೆ ಸಮಂತಾ, ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.
ತೆಲುಗು ಸಿನಿಮಾಗಳಲ್ಲಿ
ಸಮಂತಾ ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಅಲ್ಲಿ ಅಭಿಮಾನಿಯೊಬ್ಬ, ರಾಮ್ ಚರಣ್ ಜೊತೆ ಸಿನಿಮಾ ಮಾಡಿ ಎಂದಿದ್ದಾನೆ.
ಅಭಿಮಾನಿಯ ಪ್ರಶ್ನೆ
ಅದಕ್ಕೆ ಸಮಂತಾ, ಯಾಕೆ ನೀವು ‘ರಂಗಸ್ಥಳಂ’ ಸಿನಿಮಾ ನೋಡಿಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ ಆತ ಮತ್ತೊಂದು ಸಿನಿಮಾ ಮಾಡಿ ಎಂದಿದ್ದಾನೆ.
‘ರಂಗಸ್ಥಳಂ’ ಸಿನಿಮಾ
ಕೂಡಲೇ ಸಮಂತಾ, ಖಂಡಿತ ಮಾಡುತ್ತೀನಿ, ಈ ಬಗ್ಗೆ ರಾಮ್ ಚರಣ್ಗೂ ಹೇಳುತ್ತೀನಿ ಎಂದು ನಕ್ಕಿದ್ದಾರೆ ನಟಿ.
ಖಂಡಿತ ಮಾಡುತ್ತೀನಿ
ಸಮಂತಾ ಪ್ರಸ್ತುತ ಒಂದು ತೆಲುಗು ಸಿನಿಮಾ, ಒಂದು ಹಿಂದಿ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕೆಲ ಪ್ರಾಜೆಕ್ಟ್ ಕೈನಲ್ಲಿದೆ.
ಹಲವು ಸಿನಿಮಾ ಕೈಯಲ್ಲಿ
ಐಪಿಎಲ್ ನಲ್ಲಿ ಸಣ್ಣ ಉಡುಗೆ ಧರಿಸಿ ಕುಣಿದಿದ್ದಕ್ಕೆ ದಿಶಾ ಪಟಾನಿ ಮೇಲೆ ಟೀಕೆ
ಇದನ್ನೂ ನೋಡಿ