ಆ ದಿನಗಳು ಕರಾಳವಾಗಿದ್ದವು: ಅನಾರೋಗ್ಯದಿಂದ ಬಳಲಿದ್ದ ದಿನಗಳ ನೆನೆದ ಸಮಂತಾ

17 Mar 2024

Author : Manjunatha

ನಟಿ ಸಮಂತಾ ಚಿತ್ರರಂಗಕ್ಕೆ ಕಾಲಿರಿಸಿ 14 ವರ್ಷಗಳಾಗಿವೆ. 14 ವರ್ಷಗಳಿಂದಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಮಂತಾ ಋತ್ ಪ್ರಭು

ಆದರೆ ಇದೀಗ ಸಿನಿಮಾಗಳಿಂದ ಬಿಡುವು ಪಡೆದಿದ್ದಾರೆ ಸಮಂತಾ. ಅದಕ್ಕೆ ಕಾರಣವಾಗಿದ್ದ ಅವರ ಅನಾರೋಗ್ಯ. ಕಳೆದ ಕೆಲ ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಸ್ಯಾಮ್.

ಅನಾರೋಗ್ಯದಿಂದ ಬಳಲು

ಈಗ ಸಮಂತಾ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಆದರೆ ಮೊದಲು ಕಾಯಿಲೆ ಬಿದ್ದಾಗ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಂಡಿದ್ದೆ.

 ಸುಧಾರಿಸಿಕೊಂಡಿದ್ದಾರೆ

ನಾನಾಗ ‘ಯಶೋಧ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದೆ. ಆಗ ನನಗೆ ಮೆಯೋಟಿಸ್ ಕಾಣಿಸಿಕೊಂಡಿತು. ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೆ ಎಂದಿದ್ದಾರೆ.

‘ಯಶೋಧ’ ಸಿನಿಮಾ

ಸತತವಾಗಿ ಔಷಧಗಳನ್ನು ನನಗೆ ನೀಡಲಾಗಿತ್ತು. ಇಲ್ಲದಿದ್ದರೆ ನಾನು ಕುಸಿದು ಬೀಳುತ್ತಿದ್ದೆ. ‘ಯಶೋಧ’ ಸಿನಿಮಾದ ಪ್ರಚಾರಕ್ಕೆ ನಾನು ಬೇಕಾಗಿತ್ತು.

ಸಿನಿಮಾ ಪ್ರಚಾರಕ್ಕೆ 

‘ಯಶೋಧ’ ಸಿನಿಮಾದ ಪ್ರಚಾರಕ್ಕೆ ಬರಲೇ ಬೇಕೆಂಬ ಒತ್ತಡ ನನ್ನ ಮೇಲಿತ್ತು. ಅದಕ್ಕಾಗಿ ನಾನು ಪ್ರತಿದಿನ ಸತತವಾಗಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ.

     ಸತತ ಔಷಧಗಳು

‘ಸಿಟಾಡೆಲ್’ ವೆಬ್ ಸರಣಿಯಲ್ಲಿ ನಟಿಸಿದ ಬಳಿಕ ಸಮಂತಾ ಸಿನಿಮಾಗಳಿಂದ ಬಿಡುವು ತೆಗೆದುಕೊಂಡರು. ಸುಮಾರು ಆರೇಳು ತಿಂಗಳಿನಿಂದಲ ಸಮಂತಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

‘ಸಿಟಾಡೆಲ್’ ವೆಬ್ ಸರಣಿ

ಮೆಯೋಟಿಸ್​ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಗೆಳೆಯರೊಟ್ಟಿಗೆ ಪ್ರವಾಸಗಳಿಗೆ ತೆರಳುತ್ತಿದ್ದಾರೆ. ಆಧ್ಯಾತ್ಮದಲ್ಲಿ ತೊಡಗಿಕೊಂಡಿದ್ದಾರೆ. ಆರೋಗ್ಯದ ಬಗ್ಗೆ ಪಾಡ್​ಕಾಸ್ಟ್ ಪ್ರಾರಂಭಿಸಿದ್ದಾರೆ.

ಮೆಯೋಟಿಸ್​ಗೆ ಚಿಕಿತ್ಸೆ

ಸಮಂತಾ ಒಂದು ವರ್ಷದ ಗ್ಯಾಪ್ ತೆಗೆದುಕೊಂಡಿದ್ದು, ತಮಿಳಿನ ಸ್ಟಾರ್ ನಟರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮರು ಎಂಟ್ರಿ ನೀಡಲಿದ್ದಾರೆ ಎನ್ನಲಾಗಿದೆ.

ಒಂದು ವರ್ಷದ ಗ್ಯಾಪ್

‘ಗೂಗ್ಲಿ’ ಚೆಲುವೆ ಕೃತಿ ಕರಬಂಧ ಮದುವೆಯಲ್ಲಿ ಧರಿಸಿದ್ದ ಉಡುಪಿನ ಬೆಲೆ ಎಷ್ಟು ಲಕ್ಷ ಗೊತ್ತೆ?