ಕತೆ ಮುಗಿದಿಲ್ಲ, ಈಗ ಆರಂಭ ಎಂದ ಸಮಂತಾ, ಕಾರಣ?

01 AUG 2024

 Manjunatha

ಸಮಂತಾ ಕಳೆದ ಕೆಲ ವರ್ಷಗಳಲ್ಲಿ ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿರುವ ನಟಿ. 

ನಟಿ ಸಮಂತಾ ಋತ್ ಪ್ರಭು

ಆರೋಗ್ಯ ಸಮಸ್ಯೆ, ವೈವಾಹಿಕ ಸಮಸ್ಯೆ, ವೃತ್ತಿಯಲ್ಲಿ ಸಮಸ್ಯೆ, ಸಾಮಾಜಿಕ ನಿಂದನೆಗಳನ್ನು ಸಹ ಅನುಭವಿಸಿದರು.

    ಹಲವು ಸಮಸ್ಯೆಗಳು

ಆದರೆ ಎಲ್ಲವನ್ನೂ ಮೆಟ್ಟಿನಿಂತು ಹಿಂದೆಂದಿಗಿಂತಲೂ ದಿಟ್ಟವಾಗಿ ಸಮಂತಾ ಮರಳಿ ಬಂದಿದ್ದಾರೆ. ಮತ್ತೆ ಜನರೆದುರು ನಿಂತಿದ್ದಾರೆ.

ಎಲ್ಲವನ್ನೂ ಮೆಟ್ಟಿನಿಂತು

‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಯ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಂತಾ ಮೌಲ್ಯಯುತ ಮಾತೊಂದನ್ನು ಹೇಳಿದ್ದಾರೆ.

   ‘ಸಿಟಾಡೆಲ್: ಹನಿ ಬನಿ’

‘ಹಲವು ಬಾರಿ ನನಗೆ ಸಾಕು ಎನಿಸಿದೆ. ಪಾತಾಳಕ್ಕೆ ಹೋಗಿದ್ದಿದೆ. ಆದರೆ ಅಲ್ಲಿಗೆ ನನ್ನ ಕತೆ ಮುಗಿಯಿತೆಂದಲ್ಲ, ಕತೆ ಅಲ್ಲಿಂದ ಪ್ರಾರಂಭ’ ಎಂದಿದ್ದಾರೆ ಸ್ಯಾಮ್.

ಸಮಂತಾ ಅದ್ಭುತ ಮಾತು

ಸಮಂತಾ ನಟಿಸಿರುವ ‘ಸಿಟಾಡೆಲ್: ಹನಿಬನಿ’ ವೆಬ್ ಸರಣಿ ನವೆಂಬರ್ 7ಕ್ಕೆ ತೆರೆಗೆ ಬರಲಿದೆ. ಸ್ಯಾಮ್ ಗೂಢಚಾರಿಣಿ ಪಾತ್ರ ನಿರ್ವಹಿಸಿದ್ದಾರೆ.

    ‘ಸಿಟಾಡೆಲ್: ಹನಿಬನಿ’

ಸಮಂತಾ ಪ್ರಸ್ತುತ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳೇ ಹೆಚ್ಚು.

ಮಹಿಳಾ ಪ್ರಧಾನ ಸಿನಿಮಾ

ಮತ್ತೊಂದು ದಕ್ಷಿಣ ಭಾರತದ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ