ಕಷ್ಟದ ದಿನಗಳ ನೆನೆಯುತ್ತಾ, ಹೊಸ ಮನೆ ಖರೀದಿಸಿದ ಖುಷಿ ಹಂಚಿಕೊಂಡ ನಟಿ ಸಂಯುಕ್ತಾ ಹೆಗ್ಡೆ

17 Jan 2024

Author : Manjunatha

ನಟಿ ಸಂಯುಕ್ತಾ ಹೆಗ್ಡೆ ಕನ್ನಡದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ನಟನೆಗಿಂತಲೂ ನೃತ್ಯದಲ್ಲಿ ಪರಿಣಿತಿ ಹೆಚ್ಚು ಅವರಿಗೆ.

ನಟಿ ಸಂಯುಕ್ತಾ ಹೆಗ್ಡೆ

2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಈ ನಟಿ ಈಗ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿ.

‘ಕಿರಿಕ್ ಪಾರ್ಟಿ’ ನಟಿ

ಈಗ ಒಂದರಹಿಂದೊಂದು ಅವಕಾಶಗಳನ್ನು ಪಡೆಯುತ್ತಾ, ಜಾಹೀರಾತುಗಳಲ್ಲಿಯೂ ನಟಿಸುತ್ತಾ ಆರಾಮವಾಗಿದ್ದಾರೆ ಸಂಯುಕ್ತಾ.

ಹಲವು ಅವಕಾಶಗಳು

ಆದರೆ ಸಂಯುಕ್ತಾ ಹೆಗ್ಡೆ ಹಲವರಂತೆ ಕಷ್ಟದ ದಿನಗಳನ್ನು ನೋಡುತ್ತಾ, ಕಷ್ಟಪಟ್ಟು ಸ್ವಂತ ಪ್ರತಿಭೆಯಿಂದ ಚಿತ್ರರಂಗಕ್ಕೆ ಬಂದವರು.

ಸ್ವಂತ ಪರಿಶ್ರಮದ ನಟಿ

ಈಗ ಹೊಸ ಮನೆ ಖರೀದಿಸಿ, ಪೂಜೆ ನೆರವೇರಿಸಿ ಗೃಹ ಪ್ರವೇಶ ಮಾಡಿರುವ ಸಂಯುಕ್ತಾ ಹೆಗ್ಡೆ, ಹಳೆಯ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮನೆ ಖರೀದಿಸಿದ ನಟಿ

ಒಂದು ಸಮಯದಲ್ಲಿ ನಾವು ಕೇವಲ ಒಂದು ರೂಮ್​ನ ಮನೆಯಲ್ಲಿ ನಾಲ್ಕು ಜನ ಒಟ್ಟಿಗೆ ಬದುಕುತ್ತಿದ್ದೆವು. ‘ನಮ್ಮದು’ ಎಂದು ಕರೆಯಲು ನಮಗೆ ಸ್ಥಳವಿರಲಿಲ್ಲ ಎಂದಿದ್ದಾರೆ.

ಕಷ್ಟದ ದಿನ ನೆನೆದ ನಟಿ

ಎಲ್ಲ ಶ್ರಮ, ಕಣ್ಣೀರು, ಕಷ್ಟಗಳು ಇಂದು ನಮ್ಮನ್ನು ಇಲ್ಲಿಗೆ ತಲುಪಿಸಿವೆ. ಇದನ್ನು ಸಾಧ್ಯವಾಗಿಸಿದ ಎಲ್ಲ ಶಕ್ತಿಗೂ ಧನ್ಯವಾದ ಎಂದಿದ್ದಾರೆ ನಟಿ.

ಎಲ್ಲ ಶಕ್ತಿಗೂ ಧನ್ಯವಾದ

ಸಂಯುಕ್ತ ಹೆಗ್ಡೆ ತಮ್ಮ ಹೊಸ ಮನೆಯ ಗೃಹ ಪ್ರವೇಶದ ಚಿತ್ರ, ಪೂಜೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗೃಹ ಪ್ರವೇಶದ ಚಿತ್ರ

20 ಕೆಜಿ ತೂಕ ಇಳಿಸಿಕೊಂಡ ನಟಿ ಸೋನಮ್ ಕಪೂರ್, ಗುರಿ ಇನ್ನೂ ಮುಟ್ಟಿಲ್ಲ