20 ಕೆಜಿ ತೂಕ ಇಳಿಸಿಕೊಂಡ ಸೋನಮ್ ಕಪೂರ್, ಗುರಿಯನ್ನು ಇನ್ನೂ ಮುಟ್ಟಿಲ್ಲ

17 Jan 2024

Author : Manjunatha

ಬಾಲಿವುಡ್ ನಟಿ ಸೋನಮ್ ಕಪೂರ್, ಬ್ರೇಕ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

ಸೋನಮ್ ಕಪೂರ್

2007ರಲ್ಲಿ ರಣ್​ಬೀರ್ ಕಪೂರ್ ಜೊತೆಗೆ ‘ಸಾವರಿಯಾ’ ಸಿನಿಮಾ ಮೂಲಕ ಒಟ್ಟಿಗೆ ಬೆಳ್ಳಿ ತೆರೆಗೆ ಕಾಲಿಟ್ಟರು ಸೋನಮ್.

‘ಸಾವರಿಯಾ’ ಸಿನಿಮಾ

2007ರ ಸುಮಾರು ಹತ್ತು ವರ್ಷಗಳ ಕಾಲ ಒಂದರ ಹಿಂದೊಂದು ಅವಕಾಶಗಳನ್ನು ಪಡೆಯುತ್ತಲೇ ಸಾಗಿದರು.

ಹತ್ತು ವರ್ಷಗಳ ಕಾಲ

‘ಡೆಲ್ಲಿ 6’, ‘ಐ ಹೇಟ್ ಲವ್ ಸ್ಟೋರೀಸ್’, ‘ರಾಂಝನಾ’, ‘ಪ್ರೇಮ್ ರಥನ್ ಧನ್ ಪಾಯೋ’ ಇನ್ನೂ ಹಲವು ನೆನಪುಳಿಯುವ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನೆನಪುಳಿಯುವ ಸಿನಿಮಾ

2018ರಲ್ಲಿ ಸೋನಮ್ ಕಪೂರ್, ಬ್ಯುಸಿನೆಸ್ ಮ್ಯಾನ್ ಆನಂದ್ ಅಹುಜಾ ಅವರನ್ನು ವಿವಾಹವಾದರು. ಬಳಿಕ ಕೆಲ ಕಾಲ ವಿದೇಶದಲ್ಲಿ ನೆಲೆಸಿದರು.

ಪತಿ ಆನಂದ್ ಅಹುಜಾ

ಮದುವೆ ಬಳಿಕ ಸಿನಿಮಾಗಳಿಂದ ತುಸು ದೂರ ಉಳಿದಿದ್ದ ಸೋನಮ್ ಕಪೂರ್, 2022ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.

ಗಂಡು ಮಗುವಿನ ತಾಯಿ

ಅದಾದ ಬಳಿಕ ಸೋನಮ್ ಸಹಜವಾಗಿಯೇ ತುಸು ದಪ್ಪಗಾಗಿದ್ದರು. ಇದೀಗ ಸಿನಿಮಾಗಳಿಗೆ ರೀ ಎಂಟ್ರಿ ನೀಡುವ ಸಲುವಾಗಿ ಡಯಟ್, ವರ್ಕೌಟ್ ಪ್ರಾರಂಭ ಮಾಡಿದ್ದಾರೆ.

ಸಿನಿಮಾಗಳಿಗೆ ರೀ ಎಂಟ್ರಿ

ಸೋನಮ್ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 

20 ಕೆಜಿ ತೂಕ ಇಳಿಕೆ

ಸೋನಮ್​ ಕಪೂರ್​ಗೆ ಇನ್ನೂ 6 ಕೆಜಿ ತೂಕ ಇಳಿಸುವ ಗುರಿ ಇದೆಯಂತೆ. ಇತ್ತೀಚೆಗಷ್ಟೆ ಸೋನಮ್ ‘ಬ್ಲೈಂಡ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ.

6 ಕೆಜಿ ತೂಕ ಇಳಿಸಬೇಕಿದೆ

ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ