Pic credit - Instagram

Author: Rajesh Duggumane

ಸಣ್ಣ ವಯಸ್ಸಿಗೆ ನಿಧನ ಹೊಂದಿದ ಕಿರುತೆರೆ ನಟಿ ಸಂಚಿತಾ ಉಗಾಲೆ 

15 June 2026

ಸಂಚಿತಾ ಉಗಾಲೆ 

ಖ್ಯಾತ ಕಿರುತೆರೆ ನಟಿ ಸಂಚಿತಾ ಉಗಾಲೆ ಮುಂಬೈನ ತಮ್ಮ ನಿವಾಸದಲ್ಲಿ ನಿನ್ನೆ ಸಂಜೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 

ದುರಂತ ಅಂತ್ಯ

ಕೇವಲ 22 ವರ್ಷದ ಈ ಯುವ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸ್ ತನಿಖೆ

ಮುಂಬೈನ ನಲಸೋಪಾರಾ ನಿವಾಸದಲ್ಲಿ ಘಟನೆ ನಡೆದಿದ್ದು, ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಯಶಸ್ವಿ ನಟನೆ

ಜನಪ್ರಿಯ ಹಿಂದಿ ಧಾರಾವಾಹಿ 'ಕುಂಕುಮ್ ಭಾಗ್ಯ' ಸೇರಿದಂತೆ ಹಲವು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಇವರು ನಟಿಸಿ ಗುರುತಿಸಿಕೊಂಡಿದ್ದರು. 

ಕೊನೆಯ ಪೋಸ್ಟ್

ಸಾಯುವ ಕೆಲವೇ ಗಂಟೆಗಳ ಮುನ್ನ ಸಾಮಾಜಿಕ ಜಾಲತಾಣದಲ್ಲಿ ನೃತ್ಯದ ವಿಡಿಯೋ ಹಂಚಿಕೊಂಡಿದ್ದು ಈಗ ತೀವ್ರ ಚರ್ಚೆಯಾಗುತ್ತಿದೆ.

ಇಂಡಸ್ಟ್ರಿಗೆ ಆಘಾತ

ಚಿಕ್ಕ ವಯಸ್ಸಿನಲ್ಲೇ ಪ್ರತಿಭಾವಂತ ನಟಿ ಇಹಲೋಕ ತ್ಯಜಿಸಿರುವುದು ಇಡೀ ಟಿವಿ ಉದ್ಯಮಕ್ಕೆ ತೀವ್ರ ಆಘಾತವನ್ನು ಉಂಟುಮಾಡಿದೆ.

ಅಭಿಮಾನಿಗಳ ಕಂಬನಿ

ನೆಚ್ಚಿನ ನಟಿಯ ಹಠಾತ್ ಅಗಲಿಕೆಯ ಸುದ್ದಿ ಕೇಳಿ ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.