ದುಬೈನಲ್ಲಿ ಪುಟ್ಟಕ್ಕನ ಮಾಜಿ ಮಗಳು, ಪ್ರವಾಸದ ಸುಂದರ ಚಿತ್ರಗಳು ಇಲ್ಲಿವೆ

23 Mar 2025

 Manjunatha

ಸಂಜನಾ ಬುರ್ಲಿ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಬಹಳ ಜನಪ್ರಿಯತೆ ಗಳಿಸಿದ್ದಾರೆ. ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು.

     ನಟಿ ಸಂಜನಾ ಬುರ್ಲಿ

ಆದರೆ ಈಗ ಸಂಜನಾ ಬುರ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ವಿದಾಯ ಹೇಳಿದ್ದಾರೆ. ಅವರು ಆ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ.

       ಪುಟ್ಟಕ್ಕನ ಮಕ್ಕಳು

ಸಂಜನಾ ಬುರ್ಲಿ ಧಾರಾವಾಹಿಯಿಂದ ಹೊರಹೋಗಿದ್ದು, ಅವರ ಪಾತ್ರವನ್ನು ಕೊಲ್ಲಲಾಗಿದೆ. ಈಗ ಬೇರೆಯದ್ದೇ ಟ್ರ್ಯಾಕ್ ಧಾರಾವಾಹಿಯಲ್ಲಿ ನಡೆಯುತ್ತಿದೆ.

ಸಂಜನಾ ಬುರ್ಲಿ ನಿರ್ಗಮನ

ಧಾರಾವಾಹಿಯಿಂದ ಹೊರಬಂದ ಬಳಿಕ ಸಂಜನಾ ಬುರ್ಲಿ ಖಾಸಗಿ ಬದುಕಿನ ಮೇಲೆ ಗಮನ ಹರಿಸಿದ್ದಾರೆ. ಪ್ರವಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

      ಪ್ರವಾಸಗಳಲ್ಲಿ ನಟಿ

ಸಂಜನಾ ಬುರ್ಲಿ ಇದೀಗ ದುಬೈ ಪ್ರವಾಸದಲ್ಲಿದ್ದು, ಅಲ್ಲಿ ಫೆರಾರಿಲ್ಯಾಂಡ್, ಅಮ್ಯೂಸ್​ಮೆಂಟ್ ಪಾರ್ಕ್​ಗಳನ್ನು ಸುತ್ತಾಡುತ್ತಿದ್ದಾರೆ.

  ದುಬೈ ಪ್ರವಾಸದಲ್ಲಿ ನಟಿ

ಜಗತ್ತಿನ ಅತ್ಯಂತ ವೇಗದ ರೋಲಾಕೋಸ್ಟರ್ ರೈಡ್ ಅನ್ನು ಸಹ ಮಾಡಿದ್ದಾಗಿ ಖುಷಿಯಿಂದ ಹೇಳಿಕೊಂಡಿದ್ದಾರೆ ಸಂಜನಾ ಬುರ್​ಲಿ.

  ರೋಲಾಕೋಸ್ಟರ್ ರೈಡ್

ರೇಸ್ ಟ್ರ್ಯಾಕ್​ಗೂ ಭೇಟಿ ನೀಡಿ ವೇಗದ ಕಾರುಗಳಲ್ಲಿ ಪ್ರಯಾಣ ಸಹ ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

     ನಟಿಯ ಚಿತ್ರ ಇಲ್ಲಿವೆ

ಪ್ರಭಾಸ್ ಸಿನಿಮಾದಲ್ಲಿ ನಟಿಸಲಿದ್ದಾರೆ ಹಾಟ್ ನಟಿ ತೃಪ್ತಿ ದಿಮ್ರಿ