Pic credit - Instagram

Author: Rajesh Duggumane

ಚಿತ್ರರಂಗಕ್ಕೆ ಕಾಲಿಡ್ತಿರೋ ಸಂಚಿತ್ ಸಂಜೀವ್ ಯಾರು?

02 June 2026

ಕಿಚ್ಚನ ಅಳಿಯ

ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರ ಅಳಿಯ ಸಂಜಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಡೆಬ್ಯೂ ಸಿನಿಮಾ

ಇವರು ನಾಯಕರಾಗಿ ನಟಿಸಿರುವ ‘ಮ್ಯಾಂಗೋ ಪಚ್ಚ’ ಸಿನಿಮಾ ಜೂನ್ 5ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

ಪ್ರಿಯಾ ನಿರ್ಮಾಣ

ಈ ಹೊಸ ಪ್ರತಿಭೆಯ ಚೊಚ್ಚಲ ಚಿತ್ರವನ್ನು ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ನಿರ್ಮಾಣ ಮಾಡಿದ್ದಾರೆ.

ಅದ್ಭುತ ಮ್ಯಾನರಿಸಂ

ಕಿಚ್ಚ ಸುದೀಪ್ ಅವರ ಧ್ವನಿ ಹಾಗೂ ವಿಶಿಷ್ಟ ಮ್ಯಾನರಿಸಂ ಸಂಜಿತ್ ಅವರಿಗೂ ಬಂದಿದೆ ಎಂದು ಪ್ರಿಯಾ ಹೇಳಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ

ಚಿತ್ರರಂಗದ ಹಿನ್ನೆಲೆಯುಳ್ಳ ಕುಟುಂಬದಿಂದ ಬರುತ್ತಿರುವ ಈ ಯುವ ನಟನ ಮೇಲೆ ಭಾರಿ ನಿರೀಕ್ಷೆಗಳು ಮೂಡಲು ಆರಂಭವಾಗಿವೆ.

ವಿಶೇಷ ಗುಣ

ಸಂಜಿತ್ ಕೇವಲ ನಟನೆಯಷ್ಟೇ ಅಲ್ಲದೆ ಸಿನಿಮಾ ಕಲೆಯ ಹಲವು ವಿಭಾಗಗಳಲ್ಲಿ ಆಸಕ್ತಿ ಹೊಂದಿರುವ ಪ್ರತಿಭಾವಂತ ಯುವಕನಾಗಿದ್ದಾರೆ.

ಪ್ರೇಕ್ಷಕರ ಕುತೂಹಲ

ಇದೇ ವಾರ ತೆರೆಗೆ ಬರುತ್ತಿರುವ ಸಿನಿಮಾ ಮೂಲಕ ಸಂಜಿತ್ ಪ್ರೇಕ್ಷಕರನ್ನು ಹೇಗೆ ಗೆಲ್ಲಲಿದ್ದಾರೆ ಎಂಬ ಕುತೂಹಲವಿದೆ.