ನಟಿ ಸಪ್ತಮಿ ಗೌಡ ಕುದುರೆ ಸವಾರಿಯ ತರಬೇತಿ ಪಡೆಯುತ್ತಿದ್ದಾರೆ. ಯಾವ ಸಿನಿಮಾಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬುದು ಅಭಿಮಾನಿಗಳ ಪ್ರಶ್ನೆ.

29 NOV 2023

Author : Manjunatha

ಬೆಂಗಳೂರಿನ ಜೆಪಿ ನಗರದಲ್ಲಿರುವ ಕುದುರೆ ಸವಾರಿ ಕಲಿಸುವ ಸೆಂಟರ್​ನಲ್ಲಿ ಸಪ್ತಮಿ ಗೌಡ ಸವಾರಿ ಕಲಿಯುತ್ತಿದ್ದಾರೆ.

ಕುದುರೆ ಸವಾರಿ

ಜಿಪ್ಪಿ ಇಕ್ವೆಸ್ಟ್ರೇನ್ ಸೆಂಟರ್​ನಲ್ಲಿ ಸಪ್ತಮಿ ಗೌಡ, ಕುದುರೆ ಸವಾರಿ ಕಲಿಯುತ್ತಿದ್ದಾರೆ. ಕುದುರೆ ಸವಾರಿ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಜಿಪ್ಪಿ ಇಕ್ವೆಸ್ಟ್ರೇನ್

ಸಪ್ತಮಿ ಗೌಡ ಕಾಲೇಜು ದಿನಗಳಲ್ಲಿ ಬಹಳ ಒಳ್ಳೆಯ ಕ್ರೀಡಾಪಟು, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಕುದುರೆ ಸವಾರಿ ಕಲಿಕೆ ಅವರಿಗೆ ಕಷ್ಟವೇನಲ್ಲ.

ಕ್ರೀಡಾಪಟು ಸಪ್ತಮಿ

ಆದರೆ ಈಗ ಹಠಾತ್ತನೆ ಕುದುರೆ ಸವಾರಿ ತರಬೇತಿ ಯಾವ ಕಾರಣಕ್ಕೆ ಪಡೆಯುತ್ತಿದ್ದಾರೆ ಸಪ್ತಮಿ ಗೌಡ ಎಂಬುದು ಕುತೂಹಲ.

ಯಾವ ಕಾರಣಕ್ಕೆ?

ಸಪ್ತಮಿ ಗೌಡ ಯಾವುದಾದರೂ ಐತಿಹಾಸಿಕ ಅಥವಾ ಪೌರಾಣಿಕ ಸಿನಿಮಾ ಒಪ್ಪಿಕೊಂಡು ಅದಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದಾರೆ ಎಂಬ ಅನುಮಾನ ಅಭಿಮಾನಿಗಳದ್ದು.

ಸಪ್ತಮಿ ಗೌಡ

‘ಕಾಂತಾರ 2’ ಸಿನಿಮಾಕ್ಕಾಗಿ ಸಪ್ತಮಿ ಗೌಡ ಕುದುರೆ ಸವಾರಿ ಕಲಿಯುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

‘ಕಾಂತಾರ 2’ಗೆ ತಯಾರಿ

‘ಕಾಂತಾರ 2’ ಪ್ರೀಕ್ವೆಲ್ ಕತೆ ಹೊಂದಿರುವ ಕಾರಣ, ಆ ಸಿನಿಮಾದಲ್ಲಿ ಕುದುರೆ ಸವಾರಿಯ ದೃಶ್ಯಗಳು ಹೇರಳವಾಗಿರಬಹುದು, ಅದಕ್ಕಾಗಿಯೇ ಸಪ್ತಮಿ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಕಾಂತಾರ 2 ಕತೆ

ಸಪ್ತಮಿ ಗೌಡ ಪ್ರಸ್ತುತ, ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಯುವನ ನಾಯಕಿ

ಅಭಿಷೇಕ್ ಅಂಬರೀಶ್ ನಟನೆಯ ಹೊಸ ಸಿನಿಮಾಕ್ಕೂ ಸಪ್ತಮಿ ಗೌಡ ಅವರೇ ನಾಯಕಿ. ಇವೆರಡರ ಜೊತೆಗೆ ಇನ್ನೂ ಒಂದು ಸಿನಿಮಾವನ್ನು ಸಪ್ತಮಿ ಗೌಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅಭಿಷೇಕ್ ಅಂಬರೀಶ್

ನ್ಯಾಚುರಲ್ ಸ್ಟಾರ್ ನಾನಿ ಪ್ರತಿ ಸಿನಿಮಾಕ್ಕೆ ಪಡೆವ ಸಂಭಾವನೆ ಎಷ್ಟು ಗೊತ್ತೆ?