ಸಾರಾ ಅಲಿ ಖಾನ್ ಹೊಳೆಯುವ ತ್ವಚೆಯ ಗುಟ್ಟೇನು?
14 Jan 2025
Manjunatha
ಬಾಲಿವುಡ್ನ ಬೇಡಿಕೆಯ ಯುವನಟಿಯರಲ್ಲಿ ಸಾರಾ ಅಲಿ ಖಾನ್ ಪ್ರಮುಖರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಟಿ ಸಾರಾ ಅಲಿ ಖಾನ್
ಸಾರಾ ಅಲಿ ಖಾನ್ ಮುಂಚೆ ಬಹಳ ದಪ್ಪ ಇದ್ದರು, ಡಯಟ್ ಮಾಡಿ ಸಣ್ಣಗಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಮುಂಚೆ ದಪ್ಪ ಇದ್ದರು
ಸಾರಾ ಅಲಿ ಖಾನ್ ಬಹಳ ಶಿಸ್ತಿನ ಫಿಟ್ನೆಸ್ ಮೇಂಟೇನ್ ಮಾಡುತ್ತಾರೆ. ಮಾತ್ರವಲ್ಲದೆ ತ್ವಚೆಯ ಆರೋಗ್ಯದ ಬಗ್ಗೆ ಗಮನ ಕೊಡುತ್ತಾರೆ.
ಶಿಸ್ತಿನ ಫಿಟ್ನೆಸ್
ತ್ವಚೆಯನ್ನು ಫ್ರೆಶ್ ಆಗಿ ಇಟ್ಟುಕೊಳ್ಳಲು ಪ್ರತಿದಿನ ಐಸ್ ಮಸಾಜ್ ಮಾಡಿಕೊಳ್ಳುತ್ತಾರೆ. ಇದು ಅವರ ತ್ವಚೆ ಫ್ರೆಶ್ ಆಗಿರುವಂತೆ ಮಾಡುತ್ತದೆ.
ಪ್ರತಿದಿನ ಐಸ್ ಮಸಾಜ್
ಪ್ರತಿದಿನ ಚೆನ್ನಾಗಿ ನೀರು ಕುಡಿಯುತ್ತಾರೆ. ಇದರಿಂದ ತ್ವಚೆ ಒಣಗಿದಂತೆ ಆಗುವುದಿಲ್ಲ. ಫೇಸ್ ಪ್ಯಾಕ್ಗಳನ್ನು ಸಹ ನಟಿ ಬಳಸುತ್ತಾರೆ.
ನೈಸರ್ಗಿಕ ಫೇಸ್ ಪ್ಯಾಕ್
ಅತಿಯಾದ ರಾಸಾಯನಿಕಗಳು ಇರುವ ಮೇಕಪ್ ಅನ್ನು ಸಾರಾ ಅಲಿ ಖಾನ್ ಬಳಸುವುದಿಲ್ಲವಂತೆ.
ರಾಸಾಯನಿಕ ಮೇಕಪ್
ಸಾರಾ ಅಲಿ ಖಾನ್ ವಾರದ ಒಂದು ದಿನವನ್ನೂ ಸಂಪೂರ್ಣವಾಗಿ ತ್ವಚೆಯ ಆರೈಕೆಗಾಗಿ ಮೀಸಲಿಟ್ಟಿದ್ದಾರಂತೆ.
ತ್ವಚೆಯ ಆರೈಕೆಗೆ ಮೀಸಲು
ಒಂದೂ ಹಿಟ್ ಸಿನಿಮಾ ಇಲ್ಲ, ಆದರೂ ಈಕೆ ಸ್ಟಾರ್ ನಟಿ
ಇದನ್ನೂ ನೋಡಿ