'ನಾನು ಆ ಸಾರಾ ಅಲ್ಲ': ಕಾಫಿ ವಿತ್ ಕರಣ್​ನಲ್ಲಿ ಗುಟ್ಟೊಂದು ರಟ್ಟು ಮಾಡಿದ ಸಾರಾ ಅಲಿ ಖಾನ್

07 NOV 2023

ಸಾರಾ ಅಲಿ ಖಾನ್ ಮತ್ತೊಮ್ಮೆ ಕಾಫಿ ವಿತ್ ಕರಣ್​ ಶೋನಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

ಕಾಫಿ ವಿತ್ ಕರಣ್

ಈ ಹಿಂದೆ ಅಪ್ಪ ಸೈಫ್ ಅಲಿ ಖಾನ್ ಜೊತೆ ಹಾಗೂ ಮತ್ತೊಮ್ಮೆ ಗೆಳತಿ ಜಾನ್ಹವಿ ಜೊತೆ ಪಾಲ್ಗೊಂಡಿದ್ದರು. ಈಗ ಅನನ್ಯಾ ಪಾಂಡೆ ಜೊತೆ ಶೋಗೆ ಹೋಗಿದ್ದಾರೆ.

ಮೂರನೇ ಬಾರಿ

ಕಾಫಿ ವಿತ್ ಕರಣ್​ ಶೋನಲ್ಲಿ ಹಲವು ಗಾಸಿಪ್​ಗಳ ಬಗ್ಗೆ ಸಾರಾ ಅಲಿ ಖಾನ್ ಮಾತನಾಡಿದ್ದಾರೆ.

ಗಾಸಿಪ್ ಮಾತು

ನೀವು ಕ್ರಿಕೆಟಿಗ ಶುಭ್​ಮನ್ ಗಿಲ್ ಅನ್ನು ಡೇಟ್ ಮಾಡುತ್ತಿದ್ದೀರಂತೆ ಹೌದೆ? ಎಂಬ ಪ್ರಶ್ನೆಯನ್ನು ಕರಣ್ ಜೋಹರ್, ಸಾರಾಗೆ ಕೇಳಿದ್ದಾರೆ.

ಶುಭ್​ಮನ್ ಗಿಲ್

ಅದಕ್ಕೆ ಸಾರಾ, 'ನಾನು ಆ ಸಾರಾ ಅಲ್ಲ' ಎಂದು ಜಾಣ್ಮೆಯಿಂದ ಉತ್ತಿರಿಸಿದ್ದಾರೆ. ಅಸಲಿಗೆ ಶುಭ್​ಮನ್ ಗೀಲ್ ಹಾಗೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಆ ಸಾರಾ ಅಲ್ಲ

ಅದು ಮಾತ್ರವೇ ಅಲ್ಲದೆ, ಈ ಹಿಂದೆ ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಒಂದೇ ಹುಡುಗನನ್ನು ಪ್ರೀತಿಸುತ್ತಿದ್ದ ವಿಷಯವೂ ಶೋನಲ್ಲಿ ಬಹಿರಂಗವಾಗಿದೆ.

ಅನನ್ಯಾ ಪಾಂಡೆ

ಸಾರಾ ಅಲಿ ಖಾನ್ ಕಳೆದ ಬಾರಿ ವಿಜಯ್ ದೇವರಕೊಂಡ ಬಗ್ಗೆ ಶೋನಲ್ಲಿ ಮಾತನಾಡಿದ್ದರು, ಈ ಬಾರಿಯೂ ಆ ಚರ್ಚೆ ಬಂದಿದೆ.

ವಿಜಯ್ ದೇವರಕೊಂಡ

ಸಾರಾ ಅಲಿ ಖಾನ್ ಬಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ದು, ದಕ್ಷಿಣ ಭಾರತ ಚಿತ್ರರಂಗಕ್ಕೂ ಪದಾರ್ಪಣೆ ಮಾಡುವ ಪ್ರಯತ್ನದಲ್ಲಿದ್ದಾರೆ.

ಬ್ಯುಸಿ ನಟಿ

ಅನುಷ್ಕಾ ಶೆಟ್ಟಿ ಗ್ರ್ಯಾಂಡ್ ಕಮ್ ಬ್ಯಾಕ್ ಮತ್ತೆ ‘ಅರುಂಧತಿ’, ‘ಭಾಗಮತಿ’