ದಾಖಲೆ ಬರೆದ 'ಡಂಕಿ' ಸಿನಿಮಾ ಟೀಸರ್: ಮತ್ತೊಂದು ಬ್ಲಾಕ್​ ಬಸ್ಟರ್​ಗೆ ಶಾರುಖ್ ಖಾನ್ ರೆಡಿ

03 NOV 2023

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ಕಂಡಿದ್ದಾರೆ. ಈ ವರ್ಷದಲ್ಲಿ ಪಠಾಣ್ ಮತ್ತು ಜವಾನ್‌ ಎರಡು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. 

ಎರಡು ಗೆಲುವು

ಇದೇ ವರ್ಷ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಹೊಸ ದಾಖಲೆಯನ್ನು ಬರೆದಿದೆ.

'ಡಂಕಿ' ಸಿನಿಮಾ

ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆದ ಈ ಟೀಸರ್, ಕೇವಲ ಒಂದು ದಿನದಲ್ಲಿ 4 ಕೋಟಿ ವೀವ್ಸ್ ಗಳಿಸಿದೆ.

ದಾಖಲೆ

ನಿನ್ನೆ ಮುಂಬೈನಲ್ಲಿ ನಡೆದ ಡಂಕಿ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಶಾರುಖ್ ಖಾನ್,  ಪಠಾಣ್ ಹಾಗೂ ಜವಾನ್ ಸಿನಿಮಾಗಿಂತ 'ಡಂಕಿ' ಸಿನಿಮಾ ಅತಿ ಹೆಚ್ಚು ಮನರಂಜನೆ ನೀಡಲಿದೆ ಎಂದರು. 

ಮನರಂಜನೆ

ಹಿರಾನಿ ಚಿತ್ರಗಳಲ್ಲಿ ಯಾವುದೇ ನಟನಿಗಿಂತ ಕಥೆಯೇ ನಾಯಕನಾಗಿರುತ್ತದೆ. ಶೀಘ್ರದಲ್ಲೇ ಡಂಕಿಯ ಡ್ರಾಪ್ 2 ಮತ್ತು ಡ್ರಾಪ್ 3 ವಿಡಿಯೋ ರಿಲೀಸ್ ಆಗಲಿದೆ.

ಡ್ರಾಪ್ 2 ಮತ್ತು ಡ್ರಾಪ್ 3

3 ಇಡಿಯಟ್ಸ್, ಮುನ್ನಾಭಾಯಿ, ಪಿಕೆ, ಸಂಜು ಅಂಥಹಾ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ ರಾಜ್​ಕುಮಾರ್ ಹಿರಾನಿ 'ಡಂಕಿ' ಸಿನಿಮಾ ನಿರ್ದೇಶನ ಮಾಡಿದ್ದಾರೆ.

ರಾಜ್​ಕುಮಾರ್ ಹಿರಾನಿ

ಶಾರುಖ್ ಖಾನ್ ಜೊತೆ ಈ ಚಿತ್ರದಲ್ಲಿ ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ.

ಹಲವು ನಟರು

ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಇದೇ ವರ್ಷ ಕ್ರಿಸ್ಮಸ್ ಗೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಬಿಡುಗಡೆ ಯಾವಾಗ?

ಕಪ್ಪು ಬಣ್ಣದ ಸೀರೆಯುಟ್ಟು ಮಿಂಚಿದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್