ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಇದರ ಬಳಿಕ ಇನ್ನೆಷ್ಟು ಸಿನಿಮಾಗಳು ಶಿವಣ್ಣನ ಕೈಲಿವೆ?

19 OCT 2023

ಇದಾದ ಬಳಿಕ 'ಕರಟಕ ದಮನಕ' ಸಿನಿಮಾ ತೆರೆಗೆ ಬರಲಿದೆ. ಇದರಲ್ಲಿ ಶಿವಣ್ಣನ ಜೊತೆ ಪ್ರಭುದೇವ ಸಹ ಇದ್ದಾರೆ.

'ಕರಟಕ ದಮನಕ'

ಶಿವಣ್ಣ ತಮಿಳಿನಲ್ಲಿ ನಟಿಸಿರುವ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ತೆರೆಗೆ ಬರಲಿದೆ.

'ಕ್ಯಾಪ್ಟನ್ ಮಿಲ್ಲರ್'

ಅದರ ಬಳಕ 'ಭೈರತಿ ರಣಗಲ್' ಸಿನಿಮಾ ತೆರೆಗೆ ಬರಲಿದೆ. ಸಿನಿಮಾವನ್ನು 'ಮಫ್ತಿ' ನಿರ್ದೇಶಕ ನರ್ತನ್ ನಿರ್ದೇಶಿಸುತ್ತಿದ್ದಾರೆ.

'ಭೈರತಿ ರಣಗಲ್'

ಅದರ ಬಳಿಕ ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ '45' ಸಿನಿಮಾ ಬರಲಿದೆ. ಸಿನಿಮಾದಲ್ಲಿ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಸಹ ಇದ್ದಾರೆ.

'45' ಸಿನಿಮಾ

ರಾಮ್ ಧುಲಿಪುಡಿ ನಿರ್ದೇಶನದ 'ನೀ ಸಿಗೋವರೆಗೆ' ಸಿನಿಮಾ ಚಿತ್ರೀಕರಣ ಮುಗಿದಿದೆ ಎನ್ನಲಾಗುತ್ತಿದೆ. ಬಿಡುಗಡೆ ಬಗ್ಗೆ ಖಾತ್ರಿ ಇಲ್ಲ.

'ನೀ ಸಿಗೋವರೆಗೆ'

ಚಂದ್ರು ನಿರ್ದೇಶನದ 'ಕಬ್ಜ 2' ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

'ಕಬ್ಜ 2'

ರಿಷಬ್ ಶೆಟ್ಟಿ ಸಹ ಶಿವಣ್ಣನಿಗಾಗಿ ಒಂದು ಸಿನಿಮಾ ನಿರ್ದೇಶಿಸಬೇಕಿತ್ತು, ಆ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ಬಗ್ಗೆ ಖಾತ್ರಿ ಇಲ್ಲ.

ರಿಷಬ್ ಶೆಟ್ಟಿ

ಹರ್ಷ ಶಿವಣ್ಣನಿಗಾಗಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. 'ದಿ ಕೇರಳ ಸ್ಟೋರಿ' ಸಿನಿಮಾ ನಿರ್ದೇಶಕರೂ ಶಿವಣ್ಣನಿಗೆ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವು ನಿರ್ದೇಶಕರು ಶಿವಣ್ಣನಿಗೆ ಕತೆ ಹೇಳಿದ್ದಾರೆ.

ಹರ್ಷ-ಶಿವಣ್ಣ

ಇಂದು ಬಿಡುಗಡೆ ಆಗುತ್ತಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ