ನಟಿ ಶ್ರದ್ಧಾ ಶ್ರೀನಾಥ್​ರ ಥಾಯ್ಲೆಂಡ್ ಪ್ರವಾಸ ಹೀಗಿತ್ತು, ಚಿತ್ರಗಳಲ್ಲಿ ನೋಡಿ

02 SEP 2024

 Manjunatha

ಶ್ರದ್ಧಾ ಶ್ರೀನಾಥ್, ಕನ್ನಡದ ಹುಡುಗಿ. ‘ಲೂಸಿಯಾ’ ಸಿನಿಮಾ ಮೂಲಕ ನಾಯಕಿಯಾದ ಶ್ರದ್ಧಾ, ಈಗ ಬಹುಭಾಷಾ ನಟಿ.

    ನಟಿ ಶ್ರದ್ಧಾ ಶ್ರೀನಾಥ್

ಕಾನೂನು ಪದವಿ ಪಡೆದಿರುವ ಶ್ರದ್ಧಾ, ನಟನೆಯ ಆಸೆಯಿಂದ ಸಿನಿಮಾಗಳಿಗೆ ಎಂಟ್ರಿ ಕೊಟ್ಟರು. ಪ್ರತಿಭೆಗೆ ಹಲವು ಅವಕಾಶಗಳು ಅವರಿಗೆ ದೊರೆತವು.

    ಕಾನೂನು ಪದವೀಧರೆ

ಶ್ರದ್ಧಾ ಶ್ರೀನಾಥ್ ಕನ್ನಡ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ  ನಟಿಸುತ್ತಿದ್ದಾರೆ.

  ಬಹುಭಾಷಾ ನಟಿ ಶ್ರದ್ಧಾ

ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಭಾಷೆಗಳಲ್ಲಿಯೂ ಶ್ರದ್ಧಾ ನಟಿಸಿ ಸೈ ಎನಿಸಿಕೊಂಡಿದ್ದಾರೆ.

   ಸೈ ಎನಿಸಿಕೊಂಡಿದ್ದಾರೆ

ಸಿನಮಾಗಳಿಂದ ಬಿಡುವು ಪಡೆದು ಇತ್ತೀಚೆಗೆ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ ನಟಿ ಶ್ರದ್ಧಾ.

    ಥಾಯ್ಲೆಂಡ್ ಪ್ರವಾಸ

ತಮ್ಮ ಥಾಯ್ಲೆಂಡ್ ಪ್ರವಾಸದ ಕೆಲವು ಚಿತ್ರಗಳನ್ನು ನಟಿ ಶ್ರದ್ಧಾ ಶ್ರೀನಾಥ್ ಇತ್ತೀಚೆಗೆ ಹಂಚಿಕೊಂಡಿದ್ದರು.

      ಪ್ರವಾಸದ ಕೆಲ ಚಿತ್ರ

‘ಥಾಯ್ಲೆಂಡ್ ಬಗ್ಗೆ ಯಾಕಿಷ್ಟು ಹೈಪ್ ಇದೆ ಎಂಬುದು ಈಗ ಗೊತ್ತಾಯ್ತು’ ಎಂದು ನಟಿ ಶ್ರದ್ಧಾ ಬರೆದುಕೊಂಡಿದ್ದಾರೆ.

   ಯಾಕಿಷ್ಟು ಹೈಪ್ ಇದೆ'

ಶ್ರದ್ಧಾ ಪ್ರಸ್ತುತ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಶ್ರದ್ಧಾ ಬ್ಯುಸಿಯಾಗಿದ್ದಾರೆ.

   ಮೂರು ಸಿನಿಮಾಗಳಲ್ಲಿ

ಶ್ರದ್ಧಾ 2022 ರಲ್ಲಿ ಬಿಡುಗಡೆ ಆದ ‘ಡಿಯರ್ ವಿಕ್ರಂ’ ಸಿನಿಮಾದಲ್ಲಿ ನಟಿಸಿದ್ದರು ಅದಾದ ಬಳಿಕ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ.

  ಕನ್ನಡದಲ್ಲಿ ಯಾವಾಗ?

ಬಹುಮುಖ ಪ್ರತಿಭೆ ಫರಿಯಾ ಅಬ್ದುಲ್ಲ, ಆದರೆ ಅವಕಾಶಗಳ ಕೊರತೆ