ಎಷ್ಟು ಬಾರಿ ನ್ಯಾಷನಲ್​ ಅವಾರ್ಡ್​ ಪಡೆದಿದ್ದಾರೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್​?

17 Oct 2023

Pic credit - instagram

ಭಾರತೀಯ ಚಿತ್ರರಂಗದಲ್ಲಿ ಶ್ರೇಯಾ ಘೋಷಾಲ್​ ಜನಪ್ರಿಯ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಜನಪ್ರಿಯ ಗಾಯಕಿ

ಶ್ರೇಯಾ ಘೋಷಾಲ್​ ಅವರ ಅತ್ಯುತ್ತಮವಾದ ಗಾಯನಕ್ಕೆ ಐದು ಬಾರಿ ನ್ಯಾಷನಲ್​ ಅವಾರ್ಡ್​ ಸಿಕ್ಕಿದೆ.

5 ಬಾರಿ ರಾಷ್ಟ್ರ ಪ್ರಶಸ್ತಿ

ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ಭಾಷೆಯಲ್ಲೂ ಹಾಡುವ ಮೂಲಕ ಮನೆಮಾತಾದ ಶ್ರೇಯಾ.

ಬಹುಭಾಷಾ ಸಿಂಗರ್​

ಶ್ರೇಯಾ ಘೋಷಾಲ್​ ಅವರು ಮೊದಲ ಸಲ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ‘ದೇವದಾಸ್​’ ಚಿತ್ರದ ಹಾಡಿಗೆ.

‘ದೇವದಾಸ್​’

‘ಪಹೇಲಿ’ ಚಿತ್ರದ ಹಾಡಿಗಾಗಿ ಎರಡನೇ ಬಾರಿ ನ್ಯಾಷನಲ್​ ಅವಾರ್ಡ್​ ಸ್ವೀಕರಿಸಿದ ಶ್ರೇಯಾ ಘೋಷಾಲ್​.

‘ಪಹೇಲಿ’

ಶ್ರೇಯಾ ಘೋಷಾಲ್​ಗೆ 3ನೇ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದ್ದು ‘ಜಬ್​ ವಿ ಮೆಟ್​’ ಚಿತ್ರದ ‘ಏ ಇಷ್ಕ್​..’ ಗೀತೆ.

‘ಜಬ್​ ವಿ ಮೆಟ್​’

ಬೆಂಗಾಲಿಯ ‘ಅಂತಹೀನ್​’, ಮರಾಠಿಯ ‘ಜೋಗ್ವಾ’ ಚಿತ್ರದ ಹಾಡಿಗೆ ಶ್ರೇಯಾಗೆ ಸಿಕ್ತು 4ನೇ ರಾಷ್ಟ್ರ ಪ್ರಶಸ್ತಿ.

ಬೆಂಗಾಲಿ, ಮರಾಠಿ

69ನೇ ರಾಷ್ಟ್ರ ಪ್ರಶಸ್ತಿಯಲ್ಲಿ ‘ಇರವಿನ್​ ನಿಳಲ್​’ ಚಿತ್ರದ ಹಾಡಿಗೆ 5ನೇ ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಶ್ರೇಯಾ.

‘ಇರವಿನ್​ ನಿಳಲ್​’

‘ಬಿಗ್ ಬಾಸ್’ ಮನೆಯಿಂದ ಮೊದಲ ವಾರವೇ ಸ್ನೇಕ್​ ಶ್ಯಾಮ್​ ಔಟ್​