ಜೂ ಎನ್​ಟಿಆರ್​ಗೆ ಇಬ್ಬರು ನಾಯಕಿಯರು, ‘ದೇವರ’ ತಂಡಕ್ಕೆ ಮತ್ತೊಬ್ಬ ನಟಿ ಎಂಟ್ರಿ

09 Feb 2024

Author : Manjunatha

ಜೂ ಎನ್​ಟಿಆರ್ ನಟಿಸುತ್ತಿರುವ ‘ದೇವರ’ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

‘ದೇವರ’ ಸಿನಿಮಾ

ಕೊರಟಾಲ ಶಿವ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ಚೆಲುವೆ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಜಾನ್ಹವಿ ಕಪೂರ್ ನಾಯಕಿ

ಇದೀಗ ಇದೇ ಸಿನಿಮಾಕ್ಕೆ ಮತ್ತೊಬ್ಬ ನಟಿಯ ಆಗಮನವಾಗಿದೆ. ಮರಾಠಿಯ ಚೆಲುವೆಯೊಬ್ಬರನ್ನು ನಾಯಕಿಯನ್ನಾಗಿ ಸೇರಿಸಿಕೊಳ್ಳಲಾಗಿದೆ.

ಮರಾಠಿಯ ಚೆಲುವೆ

ಮರಾಠಿ, ತಮಿಳು, ಹಿಂದಿ ಒಂದು ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ ಶ್ರುತಿ ಮರಾಠೆ ‘ದೇವರ’ ಸಿನಿಮಾದಲ್ಲಿ ಜೂ ಎನ್​ಟಿಆರ್ ಜೊತೆ ನಟಿಸಲಿದ್ದಾರೆ.

ನಟಿ ಶ್ರುತಿ ಮರಾಠೆ 

‘ದೇವರ’ ಸಿನಿಮಾದಲ್ಲಿ ಜೂ ಎನ್​ಟಿಆರ್ ಅವರಿಗೆ ದ್ವಿಪಾತ್ರವಿದ್ದು, ಒಂದು ಪಾತ್ರಕ್ಕೆ ಶ್ರುತಿ ನಾಯಕಿ, ಮತ್ತೊಂದು ಪಾತ್ರಕ್ಕೆ ತಾಯಿ.

ಎರಡು ಶೇಡ್​ನಲ್ಲಿ

ಶ್ರುತಿ ಕನ್ನಡದಲ್ಲಿ ‘ಆಡೂ ಆಟ ಆಡು’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದಲ್ಲಿ ಶ್ರುತಿ ಪ್ರಕಾಶ್ ಎಂದು ಹೆಸರಿತ್ತು.

‘ಆಡೂ ಆಟ ಆಡು’

ಬಾಲಿವುಡ್ ನಟಿ ಜಾನ್ಹವಿ ಕಪೂರ್ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಸ್ಕೋಪ್ ಇರಲಿದೆಯಾದರೂ ಶ್ರುತಿಗೂ ಸಹ ಸಮಾನ ಅವಕಾಶ ಇದೆಯಂತೆ.

ಸಮಾನ ಅವಕಾಶ

ಶ್ರುತಿ ಮರಾಠಿ ಗ್ಲಾಮರ್ ಇಲ್ಲದ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ತಂದೆ ಪಾತ್ರಕ್ಕೆ ಶ್ರುತಿಯನ್ನು ನಾಯಕಿಯನ್ನಾಗಿ ಮಾಡಲಾಗಿದೆ.

ಗ್ಲಾಮರ್ ಇಲ್ಲದ ಪಾತ್ರ

‘ದೇವರ’ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ಕಡಲಿನ ತಡಿಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ.

ಎರಡು ಭಾಗಗಳಲ್ಲಿ

ದರ್ಶನ್ ಹುಟ್ಟುಹಬ್ಬದಂದು ಹೊಸ ಬಿಡುಗಡೆ ಮಾಡುತ್ತಿದ್ದಾರೆ ಬಿಗ್​ಬಾಸ್ ಇಶಾನಿ