Pic credit - Instagram

Author: Rajesh Duggumane

ವಿಚ್ಛೇದನ ವದಂತಿಗೆ ಶುಭಾ ಪೂಂಜಾ ಸ್ಪಷ್ಟನೆ 

10 June 2026

ಮಾಧ್ಯಮಗಳಿಗೆ ಧನ್ಯವಾದ

ನನ್ನ ಸುದೀರ್ಘ ಸಿನಿಮಾ ಪಯಣ ಮತ್ತು ವೃತ್ತಿಜೀವನದುದ್ದಕ್ಕೂ ಮಾಧ್ಯಮ ಮಿತ್ರರು ನೀಡಿದ ಅಪಾರ ಬೆಂಬಲಕ್ಕೆ ಸದಾ ಕೃತಜ್ಞಳಾಗಿರುತ್ತೇನೆ ಎಂದು ಶುಭಾ ಹೇಳಿದ್ದಾರೆ.

ಖಾಸಗಿತನಕ್ಕೆ ಮನವಿ

ಸದ್ಯದ ಪರಿಸ್ಥಿತಿಯಲ್ಲಿ ಸುಮಂತ್, ನಮ್ಮ ಕುಟುಂಬಸ್ಥರು ಹಾಗೂ ನನ್ನ ವೈಯಕ್ತಿಕ ಜೀವನದ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸಹಕಾರದ ನಿರೀಕ್ಷೆ

ಈ ಸೂಕ್ಷ್ಮ ಸಮಯದಲ್ಲಿ ಮಾಧ್ಯಮಗಳು ಮತ್ತು ಅಭಿಮಾನಿಗಳು ತೋರುವ ತಿಳುವಳಿಕೆ ಹಾಗೂ ಗೌರವ ನಮಗೆ ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ.

ನಾನೇ ಹೇಳುವೆ

ನಮ್ಮ ಜೀವನದ ಮುಂದಿನ ಬೆಳವಣಿಗೆಗಳ ಕುರಿತು ಸೂಕ್ತ ಸಮಯ ಬಂದಾಗ ನಾನೇ ಖುದ್ದಾಗಿ ನಿಮ್ಮೊಂದಿಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತೇನೆ.

ಪ್ರೀತಿಗೆ ವಂದನೆ

ನಟನೆಯ ದಿನಗಳಿಂದ ಹಿಡಿದು ಇಂದಿನವರೆಗೂ ನನ್ನ ಮೇಲೆ ತೋರುತ್ತಿರುವ ನಿರಂತರ ಪ್ರೀತಿ ಮತ್ತು ಕಾಳಜಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಸ್ಪಷ್ಟ ಸಂದೇಶ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ವೈವಾಹಿಕ ಜೀವನದ ವದಂತಿಗಳಿಗೆ ನಟಿ ಅಧಿಕೃತವಾಗಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಗಳ ಹಾರೈಕೆ

ಕೃತಜ್ಞತೆಗಳೊಂದಿಗೆ ಪೋಸ್ಟ್ ಮುಗಿಸಿರುವ ನಟಿಯ ಈ ಪ್ರಬುದ್ಧ ನಿರ್ಧಾರಕ್ಕೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಬೆಂಬಲ ಸೂಚಿಸಿ ಹಾರೈಸುತ್ತಿದ್ದಾರೆ.