ಬಾಲಿವುಡ್​ನಲ್ಲಿ ಇಲ್ಲ ಅವಕಾಶ, ದಕ್ಷಿಣಕ್ಕೆ ಬಂದ ಖ್ಯಾತ ನಟಿ

05 Feb 2025

 Manjunatha

ಸೊನಾಕ್ಷಿ ಸಿನ್ಹ, ಬಾಲಿವುಡ್​ನ ಖ್ಯಾತ ನಟಿಯಾಗಿದ್ದವರು, ಸಲ್ಮಾನ್ ಖಾನ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು ಈ ನಟಿ.

     ನಟಿ ಸೊನಾಕ್ಷಿ ಸಿನ್ಹ

ಆರಂಭದಲ್ಲಿ ಒಂದರ ಹಿಂದೊಂದು ಬಿಗ್​ಬಜೆಟ್ ಸಿನಿಮಾಗಳಲ್ಲಿ ನಟಿಸಿದ ಸೊನಾಕ್ಷಿ ಸಿನ್ಹ ಆ ನಂತರ ಯಾಕೋ ಡಲ್ ಆದರು.

     ಬಿಗ್ ​ಬಜೆಟ್ ಸಿನಿಮಾ

ಸೊನಾಕ್ಷಿ ಸಿನ್ಹ, ಫಿಟ್​ನೆಸ್ ಕಳೆದುಕೊಂಡಿದ್ದು ಸಹ ಅವರಿಗೆ ಅವಕಾಶ ಕಡಿಮೆಯಾಗಲು ಕಾರಣಗಳಲ್ಲೊಂದು, ಇತ್ತೀಚೆಗೆ ಮದುವೆ ಸಹ ಆಗಿದ್ದಾರೆ.

ಫಿಟ್​ನೆಸ್ ಕಳೆದುಕೊಂಡರು

ಬಾಲಿವುಡ್​ನಲ್ಲಿ ಅವಕಾಶಗಳು ಕಡಿಮೆ ಆಗುತ್ತಲೆ ದಕ್ಷಿಣ ಭಾರತ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಬೆಡಗಿ ಸೊನಾಕ್ಷಿ ಸಿನ್ಹ.

   ಅವಕಾಶ ಕಡಿಮೆ ಆಗಿವೆ

ಸೊನಾಕ್ಷಿ ಸಿನ್ಹಗೆ ದಕ್ಷಿಣ ಭಾರತದ ಸಿನಿಮಾ ಮೊದಲೇನಲ್ಲ, ಈ ಹಿಂದೆ ಅವರು ರಜನೀಕಾಂತ್ ನಟನೆಯ ‘ಲಿಂಗ’ ಸಿನಿಮಾದಲ್ಲಿ ನಟಿಸಿದ್ದರು.

  ‘ಲಿಂಗ’ ಸಿನಿಮಾ ನಾಯಕಿ

ಆ ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ತಮಗೆ ಕೊಡಲಾಗಿರವ ಸವಲತ್ತುಗಳ ಬಗ್ಗೆ ತಕರಾರು ತೆಗೆದಿದ್ದ ಸೋನಾಕ್ಷಿ ಟ್ವೀಟ್ ಮಾಡಿ ಅಸಮಾಧಾಣ ವ್ಯಕ್ತಪಡಿಸಿದ್ದರು.

   ತಕರಾರು ತೆಗೆದಿದ್ದ ನಟಿ

ಈಗ ಹತ್ತು ವರ್ಷದ ಬಳಿಕ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಸೊನಾಕ್ಷಿ, ಇಲ್ಲಾದರೂ ಗೆಲುವು ಸಿಗುತ್ತಾ ನಟಿಗೆ?

     ಹತ್ತು ವರ್ಷದ ಬಳಿಕ

ಬಾಲಿವುಡ್ ನಟನ ಮನೆಯಲ್ಲಿ ಹಾಡಿ ಕುಣಿದ ನಟಿ ಶ್ರೀಲೀಲಾ