ಬಾಲಿವುಡ್ ನಟನ ಮನೆಯಲ್ಲಿ ಹಾಡಿ ಕುಣಿದ ನಟಿ ಶ್ರೀಲೀಲಾ

04 Feb 2025

 Manjunatha

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು, ತಮಿಳು ಹಾಗೂ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನವೇ ಬಾಲಿವುಡ್​ನಲ್ಲಿ ಬೇಡಿಕೆ ಶುರುವಾಗಿದೆ.

  ಕನ್ನಡದ ನಟಿ ಶ್ರೀಲೀಲಾ

ಶ್ರೀಲೀಲಾ ಈಗಾಗಲೇ ಎರಡು ದೊಡ್ಡ ಬಾಲಿವುಡ್ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡಿದ್ದಾರೆ. ಒಂದು ಸಿನಿಮಾದ ಶೂಟಿಂಗ್ ಶುರವಾಗಿದೆ.

  ಬಾಲಿವುಡ್ ಪ್ರಾಜೆಕ್ಟ್​ಗಳು

ಶ್ರೀಲೀಲಾರ ಮೊದಲ ಬಾಲಿವುಡ್ ಸಿನಿಮಾಕ್ಕೆ ಖ್ಯಾತ ಯುವನಟ ಕಾರ್ತಿಕ್ ಆರ್ಯನ್ ನಾಯಕ, ಇದು ‘ಆಶಿಖಿ 3’ ಸಿನಿಮಾ ಎನ್ನಲಾಗುತ್ತಿದೆ.

      ಬಾಲಿವುಡ್ ಸಿನಿಮಾ

ಇತ್ತೀಚೆಗೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ನಟಿ ಶ್ರೀಲೀಲಾ ಭಾಗಿ ಆಗಿದ್ದರು. ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ ನಟಿ.

ಕಾರ್ತಿಕ್ ಆರ್ಯನ್ ಪಾರ್ಟಿ

ಶ್ರೀಲೀಲಾ, ಕಾರ್ತಿಕ್ ಆರ್ಯನ್ ಕುಟುಂಬದ ಪಾರ್ಟಿಯಲ್ಲಿ ಪಂಜಾಬಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಮನೆಯರೊಟ್ಟಿಗೆ ಬೆರೆತಿದ್ದಾರೆ.

    ಶ್ರೀಲೀಲಾ ಸಖತ್ ಸ್ಟೆಪ್ 

ಕಾರ್ತಿಕ್ ಆರ್ಯನ್ ಅವರ ಸಂಬಂಧಿಕರ ಮಗುವಿನೊಟ್ಟಿಗೆ ಶ್ರೀಲೀಲಾ ಮುದ್ದಾಗಿ ಮಾತನಾಡುತ್ತಿದ್ದು, ವಿಡಿಯೋವನ್ನು ಅವರೇ ಹಂಚಿಕೊಂಡಿದ್ದಾರೆ.

    ಮಗುವಿನೊಂದಿಗೆ ಆಟ

ಶ್ರೀಲೀಲಾ, ಕಾರ್ತಿಕ್ ಆರ್ಯನ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಬಳಿಕ ಸೈಫ್ ಅಲಿ ಖಾನ್​ ಪುತ್ರನ ಸಿನಿಮಾದಲ್ಲಿ ನಟಿಸಲಿದ್ದಾರೆ.

   ಸೈಫ್ ಅಲಿ ಖಾನ್​ ಪುತ್ರ

ಆಲಿಯಾ ಭಟ್ ಧರಿಸಿರುವ ಈ ಜೀನ್ಸ್ ಪ್ಯಾಂಟಿನ ಬೆಲೆ ಲಕ್ಷ ರೂಪಾಯಿಗಳು