ಫ್ಯಾಷನ್ ಶೋ ವೇದಿಕೆ ಮೇಲೆ ಕಣ್ಣೀರು ಹಾಕಿದ ನಟಿ ಸೋನಂ ಕಪೂರ್

02 Feb 2025

 Manjunatha

ಸೋನಂ ಕಪೂರ್ ಬಾಲಿವುಡ್​ನ ಖ್ಯಾತ ನಟಿ ಆಗಿರುವ ಜೊತೆಗೆ ಜನಪ್ರಿಯ ಮಾಡೆಲ್ ಸಹ.

   ನಟಿ ಸೋನಂ ಕಪೂರ್

ಸೋನಂ ಕಪೂರ್ ಹಲವು ಪ್ರಸಿದ್ಧ ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ. ಈಗಲೂ ಮಾಡೆಲಿಂಗ್ ಮಾಡುತ್ತಿರುತ್ತಾರೆ.

     ಈಗಲೂ ಮಾಡೆಲಿಂಗ್

ಇತ್ತೀಚೆಗೆ ಫ್ಯಾಷನ್ ಶೋ ಒಂದರಲ್ಲಿ ರ್ಯಾಂಪ್ ವಾಕ್ ಮಾಡಿದ ಸೋನಂ ಕಪೂರ್, ವೇದಿಕೆ ಮೇಲೆ ಕಣ್ಣೀರು ಹಾಕಿದರು.

   ವೇದಿಕೆ ಮೇಲೆ ಕಣ್ಣೀರು

ಸೋನಂ ಕಪೂರ್ ಕಣ್ಣೀರಿಗೆ ಕಾರಣವಾಗಿದ್ದು ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್.

ಡಿಸೈನರ್ ರೋಹಿತ್ ಬಾಲ್

ಸೋನಂ ಕಪೂರ್ ಅವರ ಆತ್ಮೀಯ ಗೆಳೆಯರೂ ಆಗಿದ್ದ ರೋಹಿತ್ ಬಾಲ್ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು.

 ಅನಾರೋಗ್ಯದಿಂದ ನಿಧನ

ರೋಹಿತ್ ಬಾಲ್ ಅವರ ಹಲವಾರು ಹೊಸ ಡಿಸೈನ್​ಗಳಿಗೆ ಸೋನಂ ಕಪೂರ್ ಮಾಡೆಲ್ ಆಗಿದ್ದರು. ರ್ಯಾಂಪ್ ವಾಕ್ ಮಾಡಿದ್ದರು.

        ರ್ಯಾಂಪ್ ವಾಕ್ 

ರ್ಯಾಂಪ್ ಮಾಡುತ್ತಲೇ ಕಣ್ಣೀರು ಹಾಕಿದ ನಟಿ ಸೋನಂ ಕಪೂರ್ ಆ ನಂತರವೂ ಸಹ ರೋಹಿತ್ ಅವರನ್ನು ನೆನಪಿಸಿಕೊಂಡು ಭಾವುಕ ಮಾತನ್ನಾಡಿದರು.

 ಭಾವುಕ ಮಾತನ್ನಾಡಿದರು

ಅನಾರೋಗ್ಯದಿಂದ ಬಳಲುತ್ತಿರುವ ಸಾಯಿ ಪಲ್ಲವಿ, ಇಕ್ಕಟ್ಟಿನಲ್ಲಿ ‘ತಾಂಡೇಲ್ ’ ಸಿನಿಮಾ