ಬಾಲಿವುಡ್ ನಾಯಕನ ಜೊತೆ ಶ್ರೀಲೀಲಾ ಲವ್ವಿ-ಡವ್ವಿ, ಮದುವೆ ಫಿಕ್ಸ್?
12 Mar 2025
Manjunatha
ಕನ್ನಡತಿ ಶ್ರೀಲೀಲಾ, ಈಗ ತೆಲುಗು ಚಿತ್ರರಂಗದ ಸ್ಟಾರ್ ನಟಿ, ಇತ್ತೀಚೆಗಷ್ಟೆ ತಮಿಳು ಹಾಗೂ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡತಿ ನಟಿ ಶ್ರೀಲೀಲಾ
ಶ್ರೀಲೀಲಾ ಬಾಲಿವುಡ್ಗೆ ಕಾಲಿಡುತ್ತಿದ್ದಂತೆ ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಒಟ್ಟೊಟ್ಟಿಗೆ ಮೂರು ಹಿಂದಿ ಸಿನಿಮಾಗಳನ್ನು ನಟಿ ಒಪ್ಪಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ ಭಾರಿ ಬೇಡಿಕೆ
ಶ್ರೀಲೀಲಾ, ಬಾಲಿವುಡ್ನ ಖ್ಯಾತ ಯುವನಟ ಕಾರ್ತಿಕ್ ಆರ್ಯನ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ‘ಆಶಿಖಿ 3’ ಎನ್ನಲಾಗುತ್ತಿದೆ.
ಕಾರ್ತಿಕ್ ಆರ್ಯನ್
ಇದೀಗ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ.
ಕಾರ್ತಿಕ್ ಜೊತೆ ಪ್ರೀತಿ
ಶ್ರೀಲೀಲಾ, ಇತ್ತೀಚೆಗಷ್ಟೆ ಕಾರ್ತಿಕ್ ಆರ್ಯನ್ ಅವರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಕುಟುಂಬದವರೊಟ್ಟಿಗೆ ಬೆರೆತು ಪಾರ್ಟಿ ಮಾಡಿದ್ದರು.
ಮನೆಯವರೊಟ್ಟಿಗೆ ಪಾರ್ಟಿ
ಇದೀಗ ಕಾರ್ತಿಕ್ ಆರ್ಯನ್ ತಾಯಿ ಸಹ ಶ್ರೀಲೀಲಾ ಪರ ಹೇಳಿಕೆ ನೀಡಿದ್ದು, ಮನೆಗೆ ಡಾಕ್ಟರ್ ಸೊಸೆ ಬೇಕು ಎಂದು ಹೇಳಿದ್ದಾರೆ.
ಡಾಕ್ಟರ್ ಸೊಸೆ ಬೇಕು
ಎಂಬಿಬಿಎಸ್ ಮುಗಿಸಿರುವ ಶ್ರೀಲೀಲಾ ತಮ್ಮ ಮನೆಗೆ ಸೊಸೆಯಾಗಿ ಬರಲಿದ್ದಾರೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ಕಾರ್ತಿಕ್ ತಾಯಿ.
ಕಾರ್ತಿಕ್ ಜೊತೆ ಮದುವೆ
ಅಗಲಿದ ಪ್ರೀತಿಯ ಶ್ವಾಸ, ನಟಿ ಸಪ್ತಮಿ ಗೌಡ ಭಾವುಕ
ಇದನ್ನೂ ನೋಡಿ