ಮೊದಲ ಸಿನಿಮಾ ಶುರುವಾಗುವ ಮುಂಚೆ ಎರಡನೇ ತಮಿಳು ಸಿನಿಮಾ ಅವಕಾಶ ಶ್ರೀಲೀಲಾಗೆ
29 Jan 2025
Manjunatha
ಶ್ರೀಲೀಲಾ ಕನ್ನಡ ಚಿತ್ರರಂಗದಿಂದ ನಟನೆ ಆರಂಭಿಸಿ ಈಗ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ತೆಲುಗು ಚಿತ್ರರಂಗದ ನಟಿ
ತೆಲುಗಿನ ಸ್ಟಾರ್ ನಟರೊಟ್ಟಿಗೆ ನಟಿಸಿರುವ ಶ್ರೀಲೀಲಾ ಇದೀಗ ಬಾಲಿವುಡ್ಗೆ ಹಾರಿದ್ದಾರೆ. ಅಲ್ಲಿಯೂ ಹವಾ ಎಬ್ಬಿಸುತ್ತಿದ್ದಾರೆ.
ಸ್ಟಾರ್ ನಟರೊಟ್ಟಿಗೆ ನಟನೆ
ತೆಲುಗಿನಲ್ಲಿ ಕೇವಲ ‘ಬಬ್ಲಿ’ ಪಾತ್ರಗಳು, ಹಾಡು ಡ್ಯಾನ್ಸ್ ಗಷ್ಟೆ ಶ್ರೀಲೀಲಾ ಸೀಮಿತವಾಗಿದ್ದರು. ಆದರೆ ಇನ್ನು ಮುಂದೆ ಹಾಗಿಲ್ಲ.
ಕೇವಲ ‘ಬಬ್ಲಿ’ ಪಾತ್ರಗಳು
ಶ್ರೀಲೀಲಾ ತಮ್ಮ ಮೊದಲ ತಮಿಳು ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾದಲ್ಲಿ ಅವರಿಗೆ ಸಖತ್ ಪವರ್ಫುಲ್ ಪಾತ್ರವೇ ಇದೆ.
ಪವರ್ಫುಲ್ ಪಾತ್ರ ಇದೆ
ಶ್ರೀಲೀಲಾ ನಟನೆಯ ಮೊದಲ ತಮಿಳು ಸಿನಿಮಾದ ಹೆಸರು, ಪೋಸ್ಟರ್ ಜನವರಿ 30ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ನಾಯಕ ಶಿವಕಾರ್ತಿಕೇಯ.
ಜನವರಿ 30ಕ್ಕೆ ಬಿಡುಗಡೆ
ಆದರೆ ಈ ಸಿನಿಮಾ ಬಿಡುಗಡೆ ಆಗುವುದಕ್ಕೆ ಮುಂಚೆಯೇ ತಮಿಳಿನಲ್ಲಿ ಹೊಸ ಸಿನಿಮಾದ ಆಫರ್ ಶ್ರೀಲೀಲಾಗೆ ಬಂದಿದೆ ಎನ್ನಲಾಗುತ್ತಿದೆ.
ಹೊಸ ಸಿನಿಮಾದ ಆಫರ್
ಶ್ರೀಲೀಲಾ, ತಮಿಳಿನ ಸ್ಟಾರ್ ನಟರೊಬ್ಬರ ಹೊಸ ಸಿನಿಮಾದಲ್ಲಿ ನಟಿಸಲು ಆಯ್ಕೆ ಆಗಿದ್ದಾರೆ. ಮಾಡರ್ನ್ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ.
ತಮಿಳಿನ ಸ್ಟಾರ್ ನಟ
ಮದುವೆ ಬಳಿಕ ಚಿತ್ರರಂಗದಿಂದ ದೂರಾಗುತ್ತಾರಾ ನಟಿ ಅದಿತಿ ರಾವ್ ಹೈದರಿ?
ಇದನ್ನೂ ನೋಡಿ