Pic credit - Instagram

Author: Rajesh Duggumane

27 June 2025

ನಟಿ ಶ್ರೀಲೀಲಾ ಕೈ ತಪ್ಪಿತು ದೊಡ್ಡ ಆಫರ್​ 

ಕನ್ನಡದ ನಟಿ 

ಶ್ರೀಲೀಲಾ ಅವರು ಕನ್ನಡದ ನಟಿ. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಅವರು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. 

ಪರಭಾಷೆಯಲ್ಲಿ 

ಶ್ರೀಲೀಲಾ ನಟಿಸಿದ್ದು ಮೊದಲು ಕನ್ನಡದಲ್ಲೇ ಆದರೂ ಆ ಬಳಿಕ ಪರಭಾಷೆಗಳಲ್ಲಿ ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಯಿತು. 

ಹಿಂದಿ ರಂಗ

ಶ್ರೀಲೀಲಾ ಅವರ ಜನಪ್ರಿಯತೆ ಈಗ ಹಿಂದಿ ಚಿತ್ರರಂಗಕ್ಕೂ ಹಬ್ಬಿದೆ. ಅಲ್ಲಿಯೂ ಅವರನ್ನು ಗುರುತಿಸುತ್ತಿದ್ದಾರೆ. ‘ಆಶಿಕಿ 3’ಚಿತ್ರಕ್ಕೆ ಶ್ರೀಲೀಲಾ ನಾಯಕಿ.

ತಪ್ಪಿತು ಆಫರ್ 

ನಟಿ ಶ್ರೀಲೀಲಾ ಅವರು ತೆಲುಗಿನ ‘ಲೆನಿನ್’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಬೇರೆ ಸಿನಿಮಾಗಳ ಕಾರಣದಿಂದ  ಅವರು ಈ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. 

ಅಖಿಲ್ ಸಿನಿಮಾ 

ಅಖಿಲ್  ಅಕ್ಕಿನೇನಿ ಚಿತ್ರದಲ್ಲಿ ಅವರು ನಟಿಸಬೇಕಿತ್ತು.ಮುರಳಿ ಕಿಶೋರ್ ಅಬ್ಬೂರ್ ಈ ಚಿತ್ರಕ್ಕೆ ಹೀರೋ. ಇದರಿಂದ ಅವರು ಹೊರಗುಳಿದಿದ್ದಾರೆ. 

ಭಾಗ್ಯಶ್ರೀ ಬೋರ್ಸೆ 

ಭಾಗ್ಯಶ್ರೀ ಬೋರ್ಸೆ ಅವರನ್ನು ಆಯ್ಕೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಘೋಷಣೆಯಾಗಿಲ್ಲ. 

ವಿಜಯ್ ಚಿತ್ರ

ವಿಜಯ್ ದೇವರಕೊಂಡ ಜೊತೆ 'ಕಿಂಗ್ಡಮ್' ಸಿನಿಮಾದಲ್ಲೂ ಭಾಗ್ಯಶ್ರೀ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಯಾಗಿವೆ. 

ದುಲ್ಕರ್ ಸಿನಿಮಾ

ತೆಲುಗಿನಲ್ಲಿ ಅವರಿಗೆ ಸರಣಿ ಅವಕಾಶಗಳು ಸಾಲುಗಟ್ಟಿ ಬರುತ್ತಿವೆ. ಪ್ರಸ್ತುತ, ಭಾಗ್ಯಶ್ರೀ ಮಲಯಾಳಂ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ಜೊತೆ 'ಕಾಂತ' ಚಿತ್ರದಲ್ಲಿ ನಟಿಸುತ್ತಿದ್ದಾರೆ.