ಮತ್ತೊಂದು ಸಿನಿಮಾದಿಂದ ಶ್ರೀಲೀಲಾ ಹೊರಕ್ಕೆ, ಈ ಬಾರಿ ಏನು ಕಾರಣ?
27 Dec 2024
Manjunatha
ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡದ ನಟಿ ಶ್ರೀಲೀಲಾ
ಆದರೆ ಇತ್ತೀಚೆಗೆ ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳನ್ನು ಶ್ರೀಲೀಲಾ ಕಳೆದುಕೊಳ್ಳುತ್ತಿದ್ದಾರೆ.
ಅವಕಾಶ ಕೈತಪ್ಪುತ್ತಿವೆ
ಇತ್ತೀಚೆಗೆ ಶ್ರೀಲೀಲಾ ಅವರು ಒಪ್ಪಂದ ಮಾಡಿಕೊಂಡಿದ್ದ ಸಿನಿಮಾದಿಂದ ಹೊರಗೆ ಇಡಲಾಗಿದೆ. ಅವರ ಬದಲಿಗೆ ಬೇರೆ ನಟಿಯನ್ನು ತೆಗೆದುಕೊಳ್ಳಲಾಗಿದೆ.
ಸಿನಿಮಾದಿಂದ ಹೊರಗೆ
ನವೀನ್ ಪೋಲಿಶೆಟ್ಟಿ ನಟಿಸಲಿರುವ ‘ಅನಗನಗಾ ಒಕ ರಾಜು’ ಸಿನಿಮಾಕ್ಕೆ ಶ್ರೀಲೀಲಾ ಅವರನ್ನು ನಾಯಕಿಯಾಗಿ ಆರಿಸಲಾಗಿತ್ತು.
ಅನಗನಗಾ ಒಕ ರಾಜು
ಆದರೆ ಈಗ ಶ್ರೀಲೀಲಾ ಅವರನ್ನು ಸಿನಿಮಾದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ ಮೀನಾಕ್ಷಿ ಚೌಧರಿಯನ್ನು ನಾಯಕಿಯಾಗಿ ಹಾಕಿಕೊಳ್ಳಲಾಗಿದೆ.
ನಟಿ ಮೀನಾಕ್ಷಿ ಚೌಧರಿ
ಶ್ರೀಲೀಲಾ ಅವರ ಡೇಟ್ಸ್ ಸಮಸ್ಯೆ ಎದುರಾದ ಕಾರಣಕ್ಕೆ ಅವರ ಬದಲಿಗೆ ಮೀನಾಕ್ಷಿ ಚೌಧರಿಯನ್ನು ಸಿನಿಮಾಕ್ಕೆ ಹಾಕಿಕೊಳ್ಳಲಾಗಿದೆ.
ಸಿನಿಮಾ ಡೇಟ್ಸ್ ಸಮಸ್ಯೆ
ಶ್ರೀಲೀಲಾ ಈಗ ಒಂದು ಹಿಂದಿ ಸಿನಿಮಾ, ಮೂರು ತೆಲುಗು ಸಿನಿಮಾ ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
ಕನ್ನಡದ ಈ ನಟಿಯನ್ನು ಶ್ರೀಲೀಲಾಗೆ ಹೋಲಿಸುತ್ತಿದ್ದಾರೆ ತೆಲುಗು ಸಿನಿಮಾ ಪ್ರೇಮಿಗಳು
ಇದನ್ನೂ ನೋಡಿ