ತಾಯಿ ಶ್ರೀದೇವಿಗೆ ಮಗಳು ಜಾನ್ಹವಿ ನಟಿಯಾಗುವುದು ಇಷ್ಟವಿರಲಿಲ್ಲ, ಶ್ರೀದೇವಿ ಆಸೆ ಬೇರೆಯೇ ಇತ್ತು

02 JUNE 2024

Author : Manjunatha

ಜಾನ್ಹವಿ ಕಪೂರ್ ಸದ್ಯದ ಟಾಪ್ ಯುವನಟಿ, ಬಾಲಿವುಡ್​ನಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲಿಯೂ ಹವಾ ಎಬ್ಬಿಸಿದ್ದಾರೆ.

   ನಟಿ ಜಾನ್ಹವಿ ಕಪೂರ್

ಆಲಿಯಾ, ದೀಪಿಕಾ ಪಡುಕೋಣೆ ಬಳಿಕ ಬಾಲಿವುಡ್​ನ ಸ್ಟಾರ್ ನಟಿ ಆಗುವ ಭರವಸೆ ಮೂಡಿಸಿದ್ದಾರೆ ಜಾನ್ಹವಿ ಕಪೂರ್.

ಬಾಲಿವುಡ್​ನ ಸ್ಟಾರ್ ನಟಿ

ಜಾನ್ಹವಿ ಕಪೂರ್ ನಟನೆ ನೋಡಿದವರು ಅವರ ತಾಯಿ ಶ್ರೀದೇವಿ ಅವರೊಟ್ಟಿಗೆ ಹೋಲಿಸಿ ನೋಡುತ್ತಾರೆ. 

  ಶ್ರೀದೇವಿ ಪುತ್ರಿ ಜಾನ್ಹವಿ

ಆದರೆ ಶ್ರೀದೇವಿಗೆ ಮಗಳು ಜಾನ್ಹವಿ ನಟಿಯಾಗುವುದು ಇಷ್ಟವಿರಲಿಲ್ಲ. ತಾಯಿಯ ಆಸೆ ಬೇರೆಯೇ ಇತ್ತು.

ಶ್ರೀದೇವಿಗೆ ಇಷ್ಟವಿರಲಿಲ್ಲ

ಜಾನ್ಹವಿ ಕಪೂರ್ ಹಾಗೂ ಖುಷಿ ಕಪೂರ್ ಇಬ್ಬರೂ ಸಹ ಚಿತ್ರರಂಗಕ್ಕೆ ಬರುವುದು ಶ್ರೀದೇವಿಗೆ ಇಷ್ಟವಿರಲಿಲ್ಲ.

ಜಾನ್ಹವಿ ಕಪೂರ್, ಖುಷಿ

ಮಕ್ಕಳಿಬ್ಬರೂ ವೈದ್ಯರಾಗಲಿ ಎಂಬ ಆಸೆ ಶ್ರೀದೇವಿ ಅವರಿಗೆ ಇತ್ತು. ಈ ಬಗ್ಗೆ ಸ್ವತಃ ಜಾನ್ಹವಿ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  ವೈದ್ಯರಾಗಲಿ ಎಂಬ ಆಸೆ

ನಾವು ತಯಾರಾಗಿ ಕನ್ನಡಿ ಮುಂದೆ ನಿಂತು ಫೊಸ್ ಕೊಡುವಾಗಲೆಲ್ಲ, ಅಮ್ಮ, ‘ನೀವು ವೈದ್ಯರಾಗಬೇಕೆಂಬ ನನ್ನ ಕನಸನ್ನು ಹಾಗೆಯೇ ಉಳಿಸಲಿದ್ದೀರೇನೋ’ ಎಂದು ಬೈಯ್ಯುತ್ತಿದ್ದರು ಎಂದಿದ್ದಾರೆ.

ಬೈಯ್ಯುತ್ತಿದ್ದರು ಶ್ರೀದೇವಿ

ಆದರೆ ಜಾನ್ಹವಿ ನಟಿಯಾಗಿಯೇ ತೀರುತ್ತೀನಿ ಎಂದಾಗ ಶ್ರೀದೇವಿ ಬೆಂಬಲಿಸಿದರು, ಮಗಳಿಗೆ ಸೂಕ್ತ ತರಬೇತಿಗಳನ್ನು ಸಹ ಹತ್ತಿರವಿದ್ದು ಕೊಡಿಸಿದರು.

  ಶ್ರೀದೇವಿ ಬೆಂಬಲಿಸಿದರು

ಆದರೆ ಜಾನ್ಹವಿಯ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಶ್ರೀದೇವಿ ನಿಧನ ಹೊಂದಿದರು. ಮಗಳ ಮೊದಲ ಸಿನಿಮಾ ನೋಡಲೇ ಇಲ್ಲ ಶ್ರೀದೇವಿ.

 ನೋಡಲೇ ಇಲ್ಲ ಶ್ರೀದೇವಿ

ಅಪ್ಪು ಜೊತೆ ನಾಯಕಿಯಾಗಿ ನಟಿಸಿದ್ದ ಈ ಸುಂದರ ನಟಿ ಯಾರೆಂದು ಗೊತ್ತಾಯ್ತ?