ಶಾರುಖ್ ಖಾನ್ ಪುತ್ರಿಯ ಹೊಸ ಸಿನಿಮಾ, ನಿರ್ಮಾಣ ಅಪ್ಪನ ಗೆಳೆಯನದ್ದೇ
06 Feb 2025
Manjunatha
ಬಾಲಿವುಡ್ನಲ್ಲಿ ನೆಪೋಟಿಸಂನ ಹೊಸ ಅಲೆ ಪ್ರಾರಂಭವಾಗಿದೆ. ರಣ್ಬೀರ್, ಆಲಿಯಾ, ಅರ್ಜುನ್ ಕಪೂರ್ ಇನ್ನೂ ಕೆಲವರ ಬಳಿಕ ಈಗ ಹೊಸ ತಲೆ ಮಾರಿನ ಎಂಟ್ರಿ ಆಗುತ್ತಿದೆ.
ಬಾಲಿವುಡ್ ನೆಪೋಟಿಸಂ
ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ, ರವೀನಾ ಟಂಡನ್ ಪುತ್ರಿ, ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಅವರುಗಳು ಒಟ್ಟೊಟ್ಟಿಗೆ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಸೈಫ್ ಅಲಿ ಖಾನ್ ಪುತ್ರ
ಸುಹಾನಾ ಖಾನ್ ಎಂಟ್ರಿಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ‘ಆರ್ಚೀಸ್’ ಸಿನಿಮಾದಲ್ಲಿ ನಟಿಸಿದ್ದ ಸುಹಾನಾರ ಲುಕ್ ಮತ್ತು ನಟನೆ ಬಗ್ಗೆ ಟೀಕೆ ವ್ಯಕ್ತವಾಗಿತ್ತು.
ಸುಹಾನಾ ಖಾನ್ ಎಂಟ್ರಿ
ಆದರೂ ಸಹ ಶಾರುಖ್ ಖಾನ್ ಕೃಪೆಯಿಂದಾಗಿ ಸುಹಾನಾ ಖಾನ್ಗೆ ಅವಕಾಶ ಮೇಲೆ ಅವಕಾಶಗಳು ಸಿಗುತ್ತಲೇ ಸಾಗುತ್ತಿವೆ. ಇದೀಗಹೊಸ ಸಿನಿಮಾ ಒಂದು ನಟಿಗೆ ದೊರೆತಿದೆ.
ಶಾರುಖ್ ಖಾನ್ ಕೃಪೆ
ಸುಹಾನಾ ಖಾನ್ ಕಾಲೇಜು ಪ್ರೇಮಕಥಾ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಶಾರುಖ್ ಖಾನ್ ಗೆಳೆಯ ಕರಣ್ ಜೋಹರ್!
ಕರಣ್ ನಿರ್ಮಾಣ
ಸುಹಾನಾ ಖಾನ್ ತಂದೆ ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಹೆಸರಿನ ಸಿನಿಮಾ ನಟಿಸಲಿದ್ದಾರೆ. ಆದರೆ ಆ ಸಿನಿಮಾದ ಚಿತ್ರೀಕರಣ ಜೂನ್ಗೆ ಮುಂದೂಡಲ್ಪಟ್ಟಿದೆ.
ಶಾರುಖ್ ಜೊತೆ ಸಿನಿಮಾ
ಇದರ ನಡುವೆ ಇದೀಗ ಕರಣ್ ಜೋಹರ್ ತಮ್ಮ ಗೆಳೆಯನ ಪುತ್ರಿಗೆ ಹೊಸ ಅವಕಾಶ ನೀಡಿದ್ದು, ಹೊಸ ಸಿನಿಮಾ ಒಂದರಲ್ಲಿ ಅವಕಾಶ ಕೊಟ್ಟಿದ್ದಾರೆ.
ಗೆಲ್ಲುತ್ತಾರಾ ನಟಿ ಸುಹಾನಾ
ಒಳ್ಳೆಯ ಸಿನಿಮಾ ಸಿಗುತ್ತಿಲ್ಲ, ಒಟಿಟಿ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ರಮ್ಯಾ
ಇದನ್ನೂ ನೋಡಿ