ಶಾರುಖ್ ಖಾನ್ ಪುತ್ರಿ ಸುಹಾನಾ ಹೆಗಲಲ್ಲಿರುವ ಈ ಪುಟ್ಟ ಬ್ಯಾಗಿನ ಬೆಲೆ ಲಕ್ಷಗಳು

01 JUNE 2024

Author : Manjunatha

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗಿದೆ.

    ಶಾರುಖ್ ಖಾನ್ ಪುತ್ರಿ

ಸುಹಾನಾ ನಟಿಸಿರುವ ಮೊದಲ ಸಿನಿಮಾ ‘ಆರ್ಚೀಸ್’ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ.

  ಸಿನಿಮಾ ರಂಗಕ್ಕೆ ಎಂಟ್ರಿ

ಸುಹಾನಾ ಇದೀಗ ಮಾಡೆಲಿಂಗ್ ಸಹ ಆರಂಭಿಸಿದ್ದು, ಕೆಲವು ಬ್ರ್ಯಾಂಡ್​ಗಳ ಅಂಬಾಸಿಡರ್ ಸಹ ಆಗಿದ್ದಾರೆ.

ಮಾಡೆಲಿಂಗ್ ಮಾಡ್ತಿದ್ದಾರೆ

ಸುಹಾನಾ ಸಖತ್ ಫ್ಯಾಷನೆಬಲ್ ಆಗಿದ್ದು, ಗ್ಲಾಮರಸ್ ಉಡುಗೆಗಳು, ದುಬಾರಿ ಬ್ರ್ಯಾಂಡೆಡ್ ಆಕ್ಸೆಸರಿಗಳನ್ನು ಬಳಸುತ್ತಾರೆ.

   ಗ್ಲಾಮರಸ್ ಉಡುಗೆಗಳು

ಇತ್ತೀಚೆಗೆ ಕೆಕೆಆರ್ ಮತ್ತು ಎಸ್​ಆರ್​ಎಚ್​ ನಡುವಿನ ಐಪಿಎಲ್ ಫೈನಲ್​ಗೆ ಬಂದಿದ್ದ ಸುಹಾನಾ ಧರಿಸಿದ್ದ ಬ್ಯಾಗ್ ಸಖತ್ ಗಮನ ಸೆಳೆಯಿತು.

      ಐಪಿಎಲ್ ಫೈನಲ್

ನೋಡಲು ಪುಟ್ಟ ಬ್ಯಾಗ್ ಇದಾದರೂ ಇದರ ಬೆಲೆ ಬರೋಬ್ಬರಿ 1.35 ಲಕ್ಷ ರೂಪಾಯಿಗಳು. ಇದು ಲೂಯಿ ವಿಟಾನ್​ನ ಬ್ಯಾಗು.

    ಬ್ಯಾಗಿನ ಬೆಲೆ ಎಷ್ಟು?

ಸುಹಾನಾರ ಮೆಚ್ಚಿನ ಬ್ರ್ಯಾಂಡ್ ಲೂಯಿ ವಿಟಾನ್. ಈ ಇಟಾಲಿಯನ್ ಬ್ರ್ಯಾಂಡ್ ವಿಶ್ವದ ಜನಪ್ರಿಯ ಬ್ರ್ಯಾಂಡ್​ಗಳಲ್ಲಿ ಒಂದು.

ಬ್ರ್ಯಾಂಡ್ ಲೂಯಿ ವಿಟಾನ್

ಸುಹಾನಾ ಇದೀಗ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದು, ಶೀಘ್ರವೇ ಚಿತ್ರೀಕರಣವನ್ನು ಪ್ರಾರಂಭ ಮಾಡಲಿದ್ದಾರೆ.

   ಹೊಸ ಸಿನಿಮಾಕ್ಕೆ ಸಹಿ

ಮತ್ತೊಂದು ವಿಶೇಷವೆಂದರೆ ಸುಹಾನಾರ ಮುಂದಿನ ಸಿನಿಮಾ ತಂದೆ ಶಾರುಖ್ ಖಾನ್ ಜೊತೆಗೆ. ಅಪ್ಪ-ಮಗಳ ಪಾತ್ರದಲ್ಲಿಯೇ ಇವರು ನಟಿಸಲಿದ್ದಾರೆ.

ಶಾರುಖ್ ಜೊತೆ ಸಿನಿಮಾ

ಮತ್ತೊಂದು ಟಾಲಿವುಡ್ ಅವಕಾಶ ಗಿಟ್ಟಿಸಿಕೊಂಡ ಬಿಕಿನಿ ಚೆಲುವೆ ದಿಶಾ ಪಟಾನಿ