ವಿಶ್ವಪ್ರಸಿದ್ಧ ಫ್ಯಾಷನ್ ಮೇಳ ಮಿಲಾನ್ ಫ್ಯಾಷನ್ ವೀಕ್ ನಲ್ಲಿ ಮಿಂಚು ಹರಿಸಿದ ನಟಿ ತಮನ್ನಾ

19 SEP 2024

 Manjunatha

ತಮನ್ನಾ ಭಾಟಿಯಾ ಸಿನಿಮಾ, ನಟನೆಯ ಜೊತೆಗೆ ಮಾಡೆಲಿಂಗ್, ಫ್ಯಾಷನ್​ನಿಂದಲೂ ಗಮನ ಸೆಳೆದಿದ್ದಾರೆ.

  ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಭಿನ್ನ ಭಿನ್ನ ಉಡುಗೆ ತೊಟ್ಟು ಫೊಟೊಶೂಟ್ ಮಾಡಿಸಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ಫ್ಯಾಷನ್ ಪ್ರಿಯೆ ತಮನ್ನಾ

ಹಲವು ಫ್ಯಾಷನ್​ ಬ್ರ್ಯಾಂಡ್​ಗಳಿಗೆ ಮಾಡೆಲ್ ಸಹ ಆಗಿರುವ ತಮನ್ನಾ, ಹಲವು ವಿನ್ಯಾಸಕರ ವಸ್ತ್ರ ತೊಟ್ಟು ರ್ಯಾಂಪ್ ವಾಕ್ ಮಾಡುತ್ತಿರುತ್ತಾರೆ. 

    ಫ್ಯಾಷನ್ ರಾಯಭಾರಿ 

ಇದೀಗ ವಿಶ್ವವಿಖ್ಯಾತ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ನಟಿ ತಮನ್ನಾ ಭಾಗಿಯಾಗಿದ್ದಾರೆ. ರೊಬರ್ಟೊ ಕಾವಿಲ್ ವಿನ್ಯಾಸದ ಬಟ್ಟೆ ಧರಿಸಿದ್ದಾರೆ.

 ಮಿಲಾನ್ ಫ್ಯಾಷನ್ ವೀಕ್

ರೊಬರ್ಟೊ ಕಾವಿಲ್ ವಿನ್ಯಾಸ ಮಾಡಿರುವ ಭಿನ್ನ ಮಾದರಿಯ ಉಡುಗೆಯನ್ನು ತೊಟ್ಟು ತಮನ್ನಾ ಭಾಟಿಯಾ ಮಿಲಾನ್​ನ ಫ್ಯಾಷನ್ ರ್ಯಾಂಪ್​ ಮೇಲೆ ನಡೆದಿದ್ದಾರೆ.

     ರೊಬರ್ಟೊ ಕಾವಿಲ್ 

ತಮನ್ನಾ ಧರಿಸಿರುವುದು ಅಪೊಲೊಸಾ ಪ್ರಿಂಟ್ ಹೊಂದಿರುವ ಜಂಪ್ ಸೂಟ್, ಈ ಜಂಪ್ ಸೂಟ್​ಗೆ ಫೆದರ್ ಡಿಸೈನ್ ಸಹ ಸೇರಿಸಲಾಗಿದೆ.

    ವಿಭಿನ್ನ ಜಂಪ್ ಸೂಟ್

ಇನ್ನೂ ಕೆಲ ದಿನ ಮಿಲಾನ್​ನಲ್ಲೇ ಇರುವ ತಮನ್ನಾ ಭಾಟಿಯಾ ಇನ್ನೂ ಕೆಲವು ಉಡುಗೆ ತೊಟ್ಟು ರ್ಯಾಂಪ್ ವಾಕ್ ಮಾಡಲಿದ್ದಾರೆ.

ತಮನ್ನಾ ರ್ಯಾಂಪ್ ವಾಕ್ 

ಅಮೆರಿಕ ಬಳಿಕ ಈಗ ದುಬೈ ಪ್ರವಾಸದಲ್ಲಿ ಪೂಜಾ ಹೆಗ್ಡೆ