ಶೀಘ್ರವೇ ವಿಜಯ್ ಜೊತೆ ತಮನ್ನಾ ಮದುವೆ, ವಾರಗೆಯ ನಟಿಯರಿಗಂತಲೂ ಭಿನ್ನವಾಗಿರಲಿದೆ ವಿವಾಹ

19 Mar 2024

Author : Manjunatha

ತಮನ್ನಾ ಭಾಟಿಯಾ ಗ್ಲಾಮರ್ ಜೊತೆಗೆ ಪ್ರತಿಭೆಯನ್ನೂ ಹೊಂದಿರುವ ಭಾರತದ ವಿರಳ ನಟಿಯರಲ್ಲಿ ಒಬ್ಬರು.

ವಿರಳ ನಟಿ ತಮನ್ನಾ

ತೆಲುಗು, ತಮಿಳು ಸಿನಿಮಾಗಳ ಮೂಲಕ ಸ್ಟಾರ್ ಆದ ತಮನ್ನಾ ಭಾಟಿಯಾ ಹಿಂದಿಯಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸ್ಟಾರ್ ಆದ ತಮನ್ನಾ

ತಮನ್ನಾ ಭಾಟಿಯಾ ಇತ್ತೀಚೆಗೆ ಮತ್ತಷ್ಟು ಗ್ಲಾಮರಸ್ ಆಗಿದ್ದು, ತಮ್ಮ ಹಾಟ್ ಚಿತ್ರ, ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಇತ್ತೀಚೆಗೆ ಪ್ರೇಮದಲ್ಲಿ ಬಿದ್ದಿದ್ದಾರೆ. ಜನಪ್ರಿಯ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ತಮನ್ನಾ ಪ್ರೀತಿಸುತ್ತಿದ್ದಾರೆ.

ಪ್ರೇಮದಲ್ಲಿ ಬಿದ್ದಿದ್ದಾರೆ

ನವ ಪ್ರೇಮಜೋಡಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಕೈ-ಕೈ ಹಿಡಿದುಕೊಂಡು ದೇಶ-ವಿದೇಶಗಳಲ್ಲಿ ಸುತ್ತಾಡುತ್ತಿದ್ದಾರೆ.

ನವ ಪ್ರೇಮಜೋಡಿ

ಈ ನವ ಜೋಡಿ ಶೀಘ್ರವೇ ವಿವಾಹವಾಗಲಿದೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ತಮನ್ನಾ ಸಹ ಇತ್ತೀಚೆಗೆ ಹೆಚ್ಚು ಹೆಚ್ಚು ದೇವಾಲಯಗಳನ್ನು ಸುತ್ತುತ್ತಿದ್ದು ವಿವಾಹಕ್ಕೆ ರೆಡಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಶೀಘ್ರವೇ ವಿವಾಹ

ಅಧ್ಯಾತ್ಮದಲ್ಲಿ ಅತಿಯಾದ ಆಸಕ್ತಿಯುಳ್ಳ ತಮನ್ನಾ ಭಾಟಿಯಾ ಸರಳ ವಿವಾಹದ ಬಗ್ಗೆ ಒಲವು ಹೊಂದಿದ್ದು, ವಿಜಯ್ ವರ್ಮಾ ಸಹ ಇದಕ್ಕೆ ಒಪ್ಪಿದ್ದಾರೆನ್ನಲಾಗುತ್ತಿದೆ.

ಭಿನ್ನವಾಗಿರಲಿದೆ ಮದುವೆ

ಇಶಾ ಫೌಂಡೇಶನ್​ನ ಸದಸ್ಯೆಯಾಗಿರುವ ತಮನ್ನಾ ಭಾಟಿಯಾ ದೇವಾಲಯದಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವಿಜಯ್ ವರ್ಮಾರನ್ನು ವರಿಸಲಿದ್ದಾರೆ.

ವಿಜಯ್ ವರ್ಮಾ ಜೊತೆ

ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ 2022ರಲ್ಲಿ ಪರಸ್ಪರ ಪ್ರೀತಿಗೆ ಬಿದ್ದರು. ಇಬ್ಬರೂ ಒಟ್ಟಿಗೆ ಅಂಥಾಲಜಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಸೆಟ್​ನಲ್ಲಿ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆಯಿತು.

ತಮನ್ನಾ-ವಿಜಯ್ 

ನಟಿ ಪ್ರಿಯಾಂಕಾ ಚೋಪ್ರಾ ಕೊರಳಲ್ಲಿ ಧರಿಸಿರುವ ನೆಕ್​ಲೆಸ್​ನ ಬೆಲೆ ಎಷ್ಟು ಲಕ್ಷಗಳು ಗೊತ್ತೆ?