ಸಿನಿಮಾಗಳಿಂದ ದೂರಾಗುತ್ತಾರೆಯೇ ನಟಿ ತಮನ್ನಾ ಭಾಟಿಯಾ

26 JUNE 2024

Author : Manjunatha

ನಟಿ ತಮನ್ನಾ ಭಾಟಿಯಾ, ದಕ್ಷಿಣ ಮೂಲದವರಲ್ಲದಿದ್ದರೂ ಅವರು ಖ್ಯಾತಿ, ಹಣ ಗಳಿಸಿದ್ದು ಮಾತ್ರ ದಕ್ಷಿಣ ಭಾರತದ ಸಿನಿಮಾಗಳ ಮೂಲಕ.

ನಟಿ ತಮನ್ನಾ ಭಾಟಿಯಾ

ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚಿದ ತಮನ್ನಾ ಭಾಟಿಯಾ, ಹಲವು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

    ಹಿಂದಿ ಸಿನಿಮಾಗಳಲ್ಲಿ

ತಮನ್ನಾ ಭಾಟಿಯಾಗೆ ಈಗ ಸುಮಾರು 35 ವರ್ಷ ವಯಸ್ಸು, ಈಗಲೂ ಸಹ ಫಿಟ್ ನೆಸ್ ಮೇಂಟೇನ್ ಮಾಡಿರುವ ನಟಿಗೆ ಒಂದರ ಹಿಂದೊಂದು ಅವಕಾಶಗಳು ಅರಸಿ ಬರುತ್ತಲೇ ಇವೆ.

  ತಮನ್ನಾ ವಯಸ್ಸೆಷ್ಟು?

ಈಗಲೂ ಸಹ ತಮನ್ನಾ ಭಾಟಿಯಾ ಕೈಯಲ್ಲಿ ನಾಲ್ಕರಿಂದ ಐದು ಸಿನಿಮಾಗಳಿವೆ. ಅದೂ ಬೇರೆ ಬೇರೆ ಭಾಷೆಗಳದ್ದು.

ನಾಲ್ಕರಿಂದ ಐದು ಸಿನಿಮಾ

ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ತಮನ್ನಾ ಭಾಟಿಯಾ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಲಿದ್ದಾರಂತೆ.

   ಸಿನಿಮಾದಿಂದ ತಮನ್ನಾ 

ತಮನ್ನಾ ಭಾಟಿಯಾ ತಮ್ಮ ಖಾಸಗಿ ಬದುಕಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವ ದೃಷ್ಟಿಯಿಂದ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡುತ್ತಾರಂತೆ.

   ಖಾಸಗಿ ಬದುಕು ಮುಖ್ಯ

ಖಾಸಗಿ ಬದುಕಿಗೆ, ಕುಟುಂಬಕ್ಕೆ, ಪ್ರಿಯಕರ ವಿಜಯ್ ವರ್ಮಾಗೆ ಹೆಚ್ಚು ಸಮಯ ಮೀಸಲಿಡುವ ಕಾರಣಕ್ಕೆ ಈ ನಿರ್ಣಯವನ್ನು ತಮನ್ನಾ ಭಾಟಿಯಾ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪ್ರೀತಿಪಾತ್ರರಿಗಾಗಿ ನಿರ್ಧಾರ

ತಮನ್ನಾ ಭಾಟಿಯಾ ಅತ್ಯುತ್ತಮ ಮಾಡೆಲ್ ಸಹ ಆಗಿದ್ದು, ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ತಗ್ಗಿಸಿ ಬ್ರ್ಯಾಂಡ್ ಡೀಲ್​ ಕಡೆಗೆ ಹೆಚ್ಚು ಫೋಕಸ್ ಮಾಡಲಿದ್ದಾರಂತೆ.

    ಅತ್ಯುತ್ತಮ ಮಾಡೆಲ್ 

ಉದ್ಯಮಿ ಸಹ ಆಗಿರುವ ತಮನ್ನಾ ಭಾಟಿಯಾ ಕೆಲವು ಬ್ರ್ಯಾಂಡ್​ಗಳ ಮೇಲೆ ಬಂಡವಾಳ ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಹೆಚ್ಚು ಮಾಡಲಿದ್ದಾರಂತೆ.

   ನವೋದ್ಯಮಿಯೂ ಸಹ

ನವಿಲಾದ ಜಾನ್ಹವಿ ಕಪೂರ್, ಪ್ಯಾರಿಸ್ ಫ್ಯಾಷನ್ ಶೋನಲ್ಲಿ ಮಿಂಚು ಹರಿಸಿದ ನಟಿ