ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ತ್ರಿಷಾ ಕೃಷ್ಣನ್ ಎಂಟು ವರ್ಷಗಳ ಬಳಿಕ ತೆಲುಗು ಚಿತ್ರರಂಗಕ್ಕೆ ಮರಳಿದ್ದಾರೆ.

04 Feb 2024

Author : Manjunatha

ನಟಿ ತ್ರಿಷಾ ಕೃಷ್ಣನ್ ಒಂದು ದಶಕಕ್ಕೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯರಾಗಿ ಹೆಸರು ಮಾಡಿದವರು.

ನಟಿ ತ್ರಿಷಾ ಕೃಷ್ಣನ್

ವರ್ಷಕ್ಕೆ ನಾಲ್ಕು-ಐದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದ ತ್ರಿಷಾ. ಬರೋಬ್ಬರಿ ಎಂಟು ವರ್ಷದಿಂದ ಒಂದೂ ತೆಲುಗು ಸಿನಿಮಾದಲ್ಲಿ ನಟಿಸಿಲ್ಲ.

8 ವರ್ಷದಿಂದ ನಟಿಸಿಲ್ಲ

ಆದರೆ ಇದೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ಮತ್ತೊಮ್ಮೆ ತೆಲುಗು ಚಿತ್ರರಂಗಕ್ಕೆ ಮರು ಎಂಟ್ರಿ ನೀಡಿದ್ದಾರೆ. ಅದೂ ಸ್ಟಾರ್ ನಟರೊಟ್ಟಿಗೆ.

ತೆಲುಗಿಗೆ ಮರು ಎಂಟ್ರಿ

ನಟಿ ತ್ರಿಷಾ, ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿರಂಜೀವಿ ಜೊತೆಗೆ ತ್ರಿಷಾಗೆ ಇದು ಎರಡನೇ ಸಿನಿಮಾ.

ಮೆಗಾಸ್ಟಾರ್ ಚಿರಂಜೀವಿ

ಚಿರಂಜೀವಿ ಪ್ರಸ್ತುತ ವಿಷ್ವಂಭರ ಹೆಸರಿನ ಫ್ಯಾಂಟಸಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ನಾಯಕಿಯಾಗಿ ತ್ರಿಷಾ ಆಯ್ಕೆ ಆಗಿದ್ದಾರೆ.

ವಿಷ್ವಂಭರ ಸಿನಿಮಾ

ತ್ರಿಷಾ ಹಾಗೂ ಮೆಗಾಸ್ಟಾರ್ ಚಿರಂಜೀವಿ ಈ ಹಿಂದೆ ‘ಸ್ಟಾಲಿನ್’ ಸಿನಿಮಾದಲ್ಲಿ ಒಟ್ಟಿಗೆ ನಟಸಿದ್ದರು. ಆ ಸಿನಿಮಾದಲ್ಲಿ ಚಿರಂಜೀವಿಗೆ ತ್ರಿಷಾ ನಾಯಕಿ.

ಸ್ಟಾಲಿನ್ ಸಿನಿಮಾ ನಾಯಕಿ

ತ್ರಿಷಾ ಪ್ರಸ್ತುತ ಎರಡು ಮಲಯಾಳಂ ಹಾಗೂ ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ.

ಈಗ ಯಾವ ಸಿನಿಮಾ

ತ್ರಿಷಾ ಕೃಷ್ಣನ್ ತಮಿಳು ಮೂಲದ ನಟಿ ಆದರೆ ತಮಿಳಿನ ಜೊತೆಗೆ ತೆಲುಗು ಚಿತ್ರರಂಗದಲ್ಲಿಯೂ ಸಖತ್ ಆಗಿ ಮಿಂಚಿದ್ದಾರೆ.

ತಮಿಳು ಮೂಲದ ನಟಿ

ತ್ರಿಷಾ ಕೃಷ್ಣನ್ ಕನ್ನಡದ ‘ಪವರ್’ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾದ ರೀಮೇಕ್ ಆದ ಈ ಸಿನಿಮಾನಲ್ಲಿ ಪುನೀತ್ ರಾಜ್​ಕುಮಾರ್ ನಾಯಕ.

ಕನ್ನಡ ದಲ್ಲಿ ನಟನೆ

ಮದುವೆ ಸಂಭ್ರಮದಲ್ಲಿ ರಕುಲ್ ಪ್ರೀತ್ ಸಿಂಗ್, ಬ್ಯಾಚುಲರ್ ಪಾರ್ಟಿಯಲ್ಲಿ ಯಾರಿದ್ದರು?