ಇಂದು ನಿಧನರಾದ ನಟ, ಮಾಜಿ ಐಎಎಸ್ ಅಧಿಕಾರಿ ಶಿವರಾಮ್ ಕುರಿತ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.

29 Feb 2024

Author : Manjunatha

ನಟ, ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ ಕೆ ಶಿವರಾಮ್ ಅವರು ಇಂದು (ಫೆಬ್ರವರಿ 29)ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆ ಶಿವರಾಮ್ ನಿಧನ

ಕೆ ಶಿವರಾಮ್, ಕನ್ನಡದಲ್ಲಿ ಪರೀಕ್ಷೆ ಬರೆದು ಐಎಎಸ್ ಮುಗಿಸಿ ಆಡಳಿತಾಧಿಕಾರಿಯಾದ ಮೊದಲ ವ್ಯಕ್ತಿ. ಹಲವು ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡದಲ್ಲಿ ಐಎಎಸ್

ಐಎಎಸ್ ಅಧಿಕಾರಿ ಆಗುವುದಕ್ಕೂ ಮುನ್ನ ಶಿವರಾಮ್ ಅವರು ಡಿವೈಎಸ್​ಪಿ ಆಗಿದ್ದರು, ಆದರೆ ಅವರ ತಾಯಿಯ ಆಸೆಯಂತೆ ಐಎಎಸ್ ಪಾಸು ಮಾಡಿ ಅಧಿಕಾರಿಯಾದರು.

ಡಿವೈಎಸ್​ಪಿ ಆಗಿದ್ದರು

ಶಿವರಾಮ್ ಅವರು ಬಾಲ್ಯದಿಂದಲೂ ಸಾಕಷ್ಟು ಕಷ್ಟ ಕಾರ್ಪಣ್ಯಗಳನ್ನು ಕಂಡು ಬೆಳೆದವರು. ಶಿಕ್ಷಣ ಪಡೆಯಲು ಸಹ ಸಾಕಷ್ಟು ಹೋರಾಟ ಮಾಡಿದ ವ್ಯಕ್ತಿ.

ಕಷ್ಟ ಕಾರ್ಪಣ್ಯದ ಜೀವನ

ಶಿವರಾಮ್ ಅವರಿಗೆ ಬಾಲ್ಯದಿಂದಲೂ ಇದ್ದಿದ್ದು ಎರಡೇ ಆಸೆ, ಸಿನಿಮಾ ನಟನಾಗಬೇಕು ಹಾಗೂ ಐಎಎಸ್ ಅಧಿಕಾರಿ ಆಗಬೇಕೆಂದು. ಎರಡೂ ಆದರು ಶಿವರಾಮ್.

ಇದ್ದಿದ್ದು ಎರಡು ಆಸೆ

ಕೆ ಶಿವರಾಮ್ ‘ಬಾ ನಲ್ಲೆ ಮಧುಚಂದ್ರಕೆ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟರು ಮಾತ್ರ ಅಲ್ಲ, ಕೆಲವು ಸಿನಿಮಾಗಳನ್ನು ವಿತರಣೆ ಸಹ ಮಾಡಿದ್ದಾರೆ.

ಸಿನಿಮಾ ವಿತರಣೆ

ಪುನೀತ್ ರಾಜ್​ಕುಮಾರ್ ನಟಿಸಿದ್ದ ಆರಂಭದ ಕೆಲವು ಸಿನಿಮಾಗಳನ್ನು ಕೆ ಶಿವರಾಮ್ ವಿತರಣೆ ಮಾಡಿದ್ದಾರೆ. ಅಪ್ಪು ಬಗ್ಗೆ ಶಿವರಾಮ್ ಅವರಿಗೆ ವಿಶೇಷ ಪ್ರೀತಿ.

ಅಪ್ಪು ಬಗ್ಗೆ ವಿಶೇಷ ಪ್ರೀತಿ

ಶಿವರಾಮ್ ಅವರಿಗೆ ತಮ್ಮ ಜೀವನ ಸಿನಿಮಾ ಆದರೆ ತಮ್ಮ ಪಾತ್ರದಲ್ಲಿ ಪುನೀತ್ ರಾಜ್​ಕುಮಾರ್ ನಟಿಸಬೇಕು ಎಂಬ ಆಸೆ ಇತ್ತು.

ಪುನೀತ್ ನಟಿಸಬೇಕಿತ್ತು

ಕೆ ಶಿವರಾಮ್ ಅವರು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳ ಸದಸ್ಯರಾಗಿದ್ದರು. ಮೊದಲಿಗೆ ಜೆಡಿಎಸ್, ಬಳಿಕ ಕಾಂಗ್ರೆಸ್, ಕೊನೆಯದಾಗಿ ಬಿಜೆಪಿ ಸೇರ್ಪಡೆಗೊಂಡರು.

ಶಿವರಾಮ್ ರಾಜಕೀಯ

ರಶ್ಮಿಕಾ ಮಂದಣ್ಣ ಉಟ್ಟಿರುವ ಈ ಅಂದವಾದ ಸೀರೆಯ ಬೆಲೆ ಎಷ್ಟು ಲಕ್ಷ?