ಫ್ಯಾಶನ್ ಕ್ವೀನ್ ಉರ್ಫಿ ಜಾವೇದ್ ಪ್ರೀತಿಸುತ್ತಿರುವ ಹುಡುಗ ಯಾರು ಗೊತ್ತಾ?
Author: Rakesh Nayak Manchi
ಉರ್ಫಿ ಜಾವೇದ್ ಯಾವಾಗಲೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಮುಂದಿರುತ್ತಾರೆ. ನಾನಾ ಅವತಾರಗಳಲ್ಲಿ ಬರುವ ಇವರು ಯಾವುದೇ ಟೀಕೆಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಉರ್ಫಿ ಜಾವೇದ್ ಲವ್ ಬಗ್ಗೆ ಹೇಳಿಕೊಂಡಿದ್ದಾರೆ
ಫ್ಯಾಶನ್ ಕ್ವೀನ್ ಉರ್ಫಿ ಜಾವೇದ್ ಅವರು ಮುನಾವರ್ ಫಾರುಕಿ ಮೇಲೆ ಲವ್ ಆಗಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.
ಕಾಮಿಡಿಯನ್ ಮುನಾವರ್ ಫಾರುಕಿ ಒಬ್ಬ ಬಿಗ್ಬಾಸ್ ಮಾಜಿ ಸ್ಪರ್ಧಿಯಾಗಿದ್ದು, ಅವರ ತಮಾಷೆಯ ವ್ಯಕ್ತಿತ್ವಕ್ಕಾಗಿ ಪ್ರೇಕ್ಷಕರು ಇಷ್ಟಪಡುತ್ತಾರೆ.
ಮುನವರ್ ಒಳ್ಳೆಯ ಹುಡುಗ. ನಾನು ಮುನವರ್ನನ್ನು ಪ್ರೀತಿಸುತ್ತೇನೆ. ಆತನನ್ನು ತುಂಬಾ ಇಷ್ಟಪಡುತ್ತೇನೆ. ನಿನ್ನ ಗೆಳತಿಯನ್ನು ಬಿಟ್ಟು ನನ್ನ ಬಳಿಗೆ ಬಾ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
ಸ್ವತಃ ಇದರ ವಿಡಿಯೋವನ್ನು ಉರ್ಫಿ ಜಾವೇದ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಆಯೇಷಾ ಖಾನ್ ಮುನಾವರ್ ಗೆಳತಿಯಾಗಿದ್ದು, ನಾಜಿಲಾ ಸಿತಾಶಿ ಮತ್ತು ಮನ್ನಾರಾ ಚೋಪ್ರಾ ಮಾಜಿ ಗೆಳತಿಯರಾಗಿದ್ದಾರೆ.
ಅರೆಬರೆ ಬಟ್ಟೆಗಳನ್ನು ತೊಟ್ಟು ಬರುವ ಉರ್ಫಿ ಜಾವೇದ್ ಸದಾ ಟೀಕೆಗೆ ಗುರಿಯಾಗುತ್ತಿರುತ್ತಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಉರ್ಫಿ ಜಾವೇದ್ 4.2 ಮಿಲಿಯನ್ಗೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಅರೆಬರೆ ಬಟ್ಟೆಗಳನ್ನು ತೊಟ್ಟು ತೆಗೆಯುವ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡುವ ಉರ್ಫಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ.
ಹಿಂದಿ ಬಿಗ್ಬಾಸ್ ಮಾಜಿ ಸ್ಪರ್ಧಿಯಾಗಿರುವ ಉರ್ಫಿ, ಸಾತ್ ಫೆರೆ ಕಿ ಹೇರಾ ಫೇರಿ, ಜಿಜಿ ಮಾ, ದಯಾನ್ ಸೇರಿದಂತೆ ಅನೇಕ ಶೋಗಳಲ್ಲಿ ಬಣ್ಣ ಹಚ್ಚಿದ್ದಾರೆ.