Pic credit - Instagram

Author: Rajesh Duggumane

ಈಗೇನು ಮಾಡ್ತಿದ್ದಾರೆ ನಟಿ ರಾಧಿಕಾ ಪಂಡಿತ್?

01 June 2026

ಸಿನಿಮಾ ಬ್ರೇಕ್

ಕನ್ನಡ ಚಿತ್ರರಂಗದ 'ಕ್ಯೂಟ್ ಕ್ವೀನ್' ರಾಧಿಕಾ ಪಂಡಿತ್ ಸದ್ಯ ಬೆಳ್ಳಿಪರದೆಯಿಂದ ದೂರವಿದ್ದು, ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

ಮುದ್ದಾದ ಮಕ್ಕಳು

ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಪಾಲನೆಯಲ್ಲಿ ತೊಡಗಿರುವ ರಾಧಿಕಾ, ತಾಯ್ತನದ ಪ್ರತಿ ಕ್ಷಣವನ್ನು ಸಂಭ್ರಮದಿಂದ ಆಸ್ವಾದಿಸುತ್ತಿದ್ದಾರೆ.

ಯಶ್ ಸಾಥ್

ರಾಕಿಂಗ್ ಸ್ಟಾರ್ ಯಶ್ ಅವರ ಸಕ್ಸಸ್ ಹಿಂದೆ ಶಕ್ತಿಯಾಗಿ ನಿಂತಿರುವ ಇವರು, ಪತಿಗೆ ಸದಾ ಬೆಂಬಲ ನೀಡುತ್ತಿದ್ದಾರೆ.

 ಫ್ಯಾಮಿಲಿ ಟೈಮ್

ಸ್ಟಾರ್ ಪಟ್ಟದ ಜಂಜಾಟದಿಂದ ದೂರ ಉಳಿದು, ಕುಟುಂಬ ಮತ್ತು ಹಿತೈಷಿಗಳೊಂದಿಗೆ ಕ್ವಾಲಿಟಿ ಸಮಯ ಕಳೆಯಲು ಆದ್ಯತೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ, ಹಬ್ಬ ಹರಿದಿನಗಳ ಸುಂದರ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಹೊಸ ಬಿಸಿನೆಸ್

ಇತ್ತೀಚಿನ ದಿನಗಳಲ್ಲಿ ರಾಧಿಕಾ ಪಂಡಿತ್ ಅವರು ಮಕ್ಕಳ ಆರೈಕೆ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಾ ಇದ್ದಾರೆ. 

ತಗ್ಗದ ಖ್ಯಾತಿ 

ಸಿನಿಮಾಗಳಲ್ಲಿ ನಟಿಸದಿದ್ದರೂ ತಮ್ಮ ವಿಭಿನ್ನ ಲೈಫ್‌ಸ್ಟೈಲ್ ಮೂಲಕ ಇಂದಿಗೂ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿಯಾಗಿಯೇ ಉಳಿದುಕೊಂಡಿದ್ದಾರೆ.