'ಮೌರ್ಯ', 'ಅರಸು' ಸಿನಿಮಾಗಳಲ್ಲಿ ನಟಿಸಿದ್ದ ಚೆಲುವೆ ಮೀರಾ ಜಾಸ್ಮಿನ್ ಈಗೇನು ಮಾಡುತ್ತಿದ್ದಾರೆ?

14 OCT 2023

ಮಲಯಾಳಂ ಚೆಲುವೆ ಮೀರಾ ಜಾಸ್ಮಿನ್, ತೆಲುಗು, ತಮಿಳು, ಕನ್ನಡ ಚಿತ್ರರಂಗಗಳಲ್ಲಿಯೂ ಜನಪ್ರಿಯತೆ ಗಳಿಸಿದ್ದರು.

ಮೀರಾ ಜಾಸ್ಮಿನ್

2001ರಲ್ಲಿ ಬಿಡುಗಡೆ ಆಗಿದ್ದ 'ಸೂತ್ರಧಾರನ್' ಮಲಯಾಳಂ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು ಈ ಚೆಲುವೆ.

2001ರಲ್ಲಿ ಪದಾರ್ಪಣೆ

ಚಿತ್ರರಂಗಕ್ಕೆ ಕಾಲಿಟ್ಟ ಎರಡೇ ವರ್ಷದಲ್ಲಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಸಹ ಗೆದ್ದುಕೊಂಡರು. ಅತ್ಯಂತ ಕಡಿಮೆ ವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದ ಶ್ರೇಯ ಮೀರಾ ಅವರದ್ದು.

ರಾಷ್ಟ್ರಪ್ರಶಸ್ತಿ

2004ರಲ್ಲಿ ಅಪ್ಪು ನಟಿಸಿದ್ದ 'ಮೌರ್ಯ' ಸಿನಿಮಾದಲ್ಲಿ ಮೀರಾ ನಟಿಸಿದ್ದರು, ಇದು ಅವರ ಮೊದಲ ಕನ್ನಡ ಸಿನಿಮಾ.

ಮೊದಲ ಕನ್ನಡ ಸಿನಿಮಾ

ಪುನೀತ್ ರಾಜ್​ಕುಮಾರ್ ಜೊತೆ ಆಪ್ತ ಸ್ನೇಹ ಹೊಂದಿದ್ದ ಮೀರಾ ಆ ಬಳಿಕ ಅವರೊಟ್ಟಿಗೆ 'ಅರಸು' ಸಿನಿಮಾದಲ್ಲಿಯೂ ನಟಿಸಿದರು.

ಅಪ್ಪು ಜೊತೆ ಸ್ನೇಹ

'ಇಜ್ಜೋಡು', ರವಿಚಂದ್ರನ್ ನಟನೆಯ 'ಹೂ' ಸಿನಿಮಾಗಳಲ್ಲಿಯೂ ಮೀರಾ ಜಾಸ್ಮಿನ್ ನಟಿಸಿದರು.

ಕನ್ನಡ ಸಿನಿಮಾಗಳು

ಆದರೆ ಕಾಲ ಕಳೆದಂತೆ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಮೀರಾ ಜಾಸ್ಮಿನ್ ಇದೀಗ ಕಮ್​ಬ್ಯಾಕ್​ ಸಮಯದಲ್ಲಿದ್ದಾರೆ.

ಕಮ್​ಬ್ಯಾಕ್

ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುವ ಮೀರಾ, ಹೊರ ರೀತಿಯ ಕಮ್ ಬ್ಯಾಕ್​ನ ನಿರೀಕ್ಷೆಯಲ್ಲಿದ್ದಾರೆ.

ಇನ್​ಸ್ಟಾಗ್ರಾಂ

ಗ್ಲಾಮರಸ್ ಅವತಾರದಲ್ಲಿ ಮಿಂಚಿದ ನಟಿ ಶ್ರೀಲೀಲಾ