ಟಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಕೊಂಡಿರುವ ನಟಿ ಲಿಶಿ ಗಣೇಶ ಯಾರು?

27 Feb 2024

Author : Manjunatha

ಟಾಲಿವುಡ್​ನಲ್ಲಿ ಮತ್ತೊಮ್ಮೆ ಡ್ರಗ್ಸ್ ಪ್ರಕರಣ ಕೇಳಿ ಬಂದಿದೆ. ಸಿನಿಮಾ ನಿರ್ಮಾಪಕ, ನಟಿ, ಸ್ಟಾರ್ ನಿರ್ದೇಶಕರುಗಳ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ.

ಟಾಲಿವುಡ್ ಡ್ರಗ್ಸ್ ಪ್ರಕರಣ

ಗಚ್ಚಿಬೌಲಿಯ ರ್ಯಾಡಿಸನ್ ಬ್ಲೂ ಹೋಟೆಲ್​ನ ಮೇಲೆ ಮಾಡಲಾದ ದಾಳಿಯಲ್ಲಿ ಡ್ರಗ್ಸ್ ಪೆಡ್ಲರ್ ಹಾಗೂ ಕೆಲವು ಮಾದಕ ವ್ಯಸನಿಗಳು ಸಿಕ್ಕಿಕೊಂಡಿದ್ದಾರೆ.

ರ್ಯಾಡಿಸನ್ ಹೋಟೆಲ್

ಪ್ರಕರಣ ಕುರಿತಾಗಿ ಎಫ್​ಐಆರ್ ದಾಖಲಾಗಿದ್ದು, ನಟಿ ಲಿಶಿ ಗಣೇಶ, ನಿರ್ಮಾಪಕ ಕೇದರ್ ಸೆಲಗಮಶೆಟ್ಟಿ, ನಿರ್ದೇಶಕ ಕ್ರಿಶ್ ಹೆಸರುಗಳು ಎಫ್​ಐಆರ್​ನಲ್ಲಿವೆ.

ನಟಿ ಲಿಶಿ ಗಣೇಶ

ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಕೊಂಡಿರುವ ನಟಿ ಲಿಶಿ ಗಣೇಶ, ಈ ಹಿಂದೆ ‘ಜಾಮೆಟ್ರಿ’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ.

ನಟಿಸಿರುವ ಸಿನಿಮಾ?

ಮಾಡೆಲ್ ಆಗಿರುವ ಲಿಶಿ ಗಣೇಶ ಯೂಟ್ಯೂಬರ್ ಸಹ ಆಗಿದ್ದು, ಯೂಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದಾರೆ. ಕೆಲ ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಯೂಟ್ಯೂಬರ್ ಸಹ

ಈ ಹಿಂದೆ 2022ರಲ್ಲಿ ಸಹ ಲಿಶಿ ಗಣೇಶ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅವರ ಜೊತೆಗೆ ಅವರ ಸಹೋದರಿ ಕಲ್ಲಪು ಕುಶಿತಾ ಸಹ ಆರೋಪಿಯಾಗಿದ್ದರು.

ಹಿಂದೊಮ್ಮೆ ಆರೋಪಿ

ತಮ್ಮ ಮೇಲಿನ ಡ್ರಗ್ಸ್ ಸೇವನೆ ಆರೋಪವನ್ನು ನಟಿ ಲಿಶಿ ಗಣೇಶ ತಳ್ಳಿ ಹಾಕಿದ್ದಾರೆ. ತಾವು ಪಾರ್ಟಿಗೆ ಹಾಜರಾಗಿದ್ದು ಒಪ್ಪಿಕೊಂಡಿದ್ದಾರೆ, ಆದರೆ ಡ್ರಗ್ಸ್ ಸೇವಿಸಿಲ್ಲ ಎಂದಿದ್ದಾರೆ.

ಆರೋಪ ನಿರಾಕರಣೆ

ಲಿಶಿ ಗಣೇಶ ಇನ್​ಸ್ಟಾಗ್ರಾಂನಲ್ಲಿ ಜನಪ್ರಿಯರಾಗಿದ್ದು ಸುಮಾರು 25 ಸಾವಿರ ಫಾಲೋವರ್​ಗಳನ್ನು ಹೊಂದಿದ್ದಾರೆ.

ಇನ್​ಸ್ಟಾ ಮಾಡೆಲ್

ನಟಿಯಾಗಿ ಹೆಚ್ಚು ಸಿನಿಮಾಗಳು ಕೈಯಲ್ಲಿಲ್ಲವಾದರೂ ಲಿಶಿ ಗಣೇಶ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಐಶಾರಾಮಿ ಜೀವನ

ಮೆಚ್ಚಿನ ಇಬ್ಬರು ನಟರ ಚಿತ್ರ ಹಂಚಿಕೊಂಡ ನಟಿ ಸಮಂತಾ: ಯಾರು ಆ ನಟರು?