ನಟಿ ರಕುಲ್ ಪ್ರೀತ್​ ಸಿಂಗ್​ರ ಬಾಯ್​ಫ್ರೆಂಡ್ ಜಾಕಿ ಬಗ್ನಾನಿ ಬಗ್ಗೆ ನಿಮಗೆಷ್ಟು ಗೊತ್ತು?

26 DEC 2023

Author : Manjunatha

ರಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್​ ಎರಡರಲ್ಲೂ ಯಶಸ್ಸು ಕಂಡ ನಟಿ.

ರಕುಲ್ ಪ್ರೀತ್ ಸಿಂಗ್

ಹಲವು ನಟಿಯರು ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಗೊಳಿಸುವುದಿಲ್ಲ, ಆದರೆ ರಕುಲ್ ಪ್ರೀತ್ ಸಿಂಗ್ ಹಾಗಲ್ಲ.

ರಕುಲ್ ಪ್ರೀತಿ ವಿಚಾರ

ರಕುಲ್ ಪ್ರೀತ್ ಸಿಂಗ್, ನಟ, ನಿರ್ಮಾಪಕ ಜಾಕಿ ಬಗ್ನಾನಿ ಜೊತೆಗೆ 2021ರಿಂದಲೂ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದಾರೆ. ರಕುಲ್ ಈ ವಿಷಯವನ್ನು ಗುಟ್ಟಾಗಿಟ್ಟಿಲ್ಲ.

 ಜಾಕಿ ಬಗ್ನಾನಿ

ಜಾಕಿ ಬಗ್ನಾನಿ, ಬಾಲಿವುಡ್​ನ ನಟ ಜೊತೆಗೆ ನಿರ್ಮಾಪಕರೂ ಹೌದು. ನಟನೆಯಲ್ಲಿ ಯಶಸ್ಸು ಇವರಿಗೆ ಲಭಿಸಿಲ್ಲ. ನಿರ್ಮಾಪಕರಾಗಿ ಸಾಧಾರಣ ಯಶಸ್ಸು ಲಭಿಸಿದೆ.

ನಟ ಹಾಗೂ ನಿರ್ಮಾಪಕ

ಜಾನಿ ಬಗ್ನಾನಿ ಈ ವರೆಗೆ ಒಂಬತ್ತು ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಯಾವೊಂದು ಸಿನಿಮಾ ಸಹ ಹಿಟ್ ಎನಿಸಿಕೊಂಡಿಲ್ಲ.

ನಟನಾಗಿ ಫೇಲ್

2018ರಲ್ಲಿ ನಟನೆಗೆ ಗುಡ್​ಬೈ ಹೇಳಿ ನಿರ್ಮಾಣದಲ್ಲಿ ತೊಡಗಿಸಿಕೊಂಡರು ಜಾಕಿ ಬಗ್ನಾನಿ, ನಟನೆಗೆ ಹೋಲಿಸಿದರೆ ನಿರ್ಮಾಣದಲ್ಲಿ ಅಲ್ಪ ಯಶಸ್ಸು ಗಳಿಸಿದ್ದಾರೆ.

ನಟನೆಗೆ ಗುಡ್​ಬೈ

ಐಶ್ವರ್ಯಾ ರೈ ನಟನೆಯ ‘ಸರಬ್​ಜೀತ್’ ಸೇರಿದಂತೆ ಅಕ್ಷಯ್ ಕುಮಾರ್, ವರುಣ್ ಧವನ್, ಟೈಗರ್ ಶ್ರಾಫ್ ಅಂಥಹಾ ಸ್ಟಾರ್​ಗಳ ಸಿನಿಮಾ ನಿರ್ಮಾಣ ಮಾಡಿದ್ದಾರೆ ಜಾಕಿ.

ಸ್ಟಾರ್ ನಟರ ಸಿನಿಮಾ

ಪ್ರಸ್ತುತ ನಾಲ್ಕು ಹಿಂದಿ ಸಿನಿಮಾಗಳ ಮೇಲೆ ಜಾಕಿ ಬಂಡವಾಳ ಹೂಡಿದ್ದಾರೆ. ನಾಲ್ಕೂ ಸಹ ದೊಡ್ಡ ಬಜೆಟ್​ನ ಸ್ಟಾರ್ ನಟರ ಸಿನಿಮಾಗಳು.

ಜಾಕಿ ಬಂಡವಾಳ

ಮಂಡ್ಯದ ‘ಕಾಟೇರ’ ಇವೆಂಟ್​ನಲ್ಲಿ ಸಖತ್ ಮಿಂಚಿದ ನಟಿ ಮೇಘಾ ಶೆಟ್ಟಿ