ವಿಜಯ್ ದೇವರಕೊಂಡ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ರುಕ್ಮಿಣಿ ವಸಂತ್

07 Feb 2025

 Manjunatha

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ನಟಿ ರುಕ್ಮಿಣಿ ವಸಂತ್ ಪ್ರತಿಭೆ ಇಡೀ ದೇಶಕ್ಕೆ ಗೊತ್ತಾಗಿದೆ. ಅಭಿಮಾನಿಗಳ ಸಂಖ್ಯೆ ಹತ್ತುಪಟ್ಟಾಗಿದೆ.

   ರುಕ್ಮಿಣಿ ವಸಂತ್ ಪ್ರತಿಭೆ

ಇದೀಗ ನಟಿ ರುಕ್ಮಿಣಿ ವಸಂತ್​ಗೆ ಕನ್ನಡದಿಂದ ಮಾತ್ರವೇ ಅಲ್ಲದೆ ಪರಭಾಷೆಗಳಿಂದಲೂ ಅವಕಾಶಗಳ ಮೇಲೆ ಅವಕಾಶಗಳು ಬರುತ್ತಿವೆ.

  ಪರಭಾಷೆ ಅವಕಾಶಗಳು

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ರುಕ್ಮಿಣಿ ವಸಂತ್ ನಟಿಸಿರುವ ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾ ಬಿಡುಗಡೆ ಆಗಿದೆ.

ನಟಿಯ ಬೇಡಿಕೆ ಹೆಚ್ಚಾಗಿದೆ

ಈಗಲೂ ಸಹ ರುಕ್ಮಿಣಿ ವಸಂತ್ ಕೈಯಲ್ಲಿ ಹಲವು ಪರಭಾಷೆಯ ಸಿನಿಮಾಗಳಿವೆ. ಅದರಲ್ಲೂ ಬಹುತೇಕ ಸಿನಿಮಾಗಳು ಭಾರಿ ಬಜೆಟ್ ಸಿನಿಮಾಗಳು.

  ಕೈಯಲ್ಲಿವೆ ಹಲವು ಚಿತ್ರ

ರುಕ್ಮಿಣಿ ವಸಂತ್, ವಿಜಯ್ ದೇವರಕೊಂಡ ನಟನೆಯ ‘ರೌಡಿ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಆದರೆ ಆ ಸಿನಿಮಾದಿಂದ ಹೊರಬಂದಿದ್ದಾರೆ ನಟಿ.

‘ರೌಡಿ’ ಸಿನಿಮಾದಿಂದ ಔಟ್

ರುಕ್ಮಿಣಿ ವಸಂತ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಒಂದರ ನಂತರ ಇನ್ನೊಂದು ಸಿನಿಮಾದ ಮೇಲೆ ಗಮನ ಹರಿಸಬೇಕು ಎಂಬ ಕಾರಣಕ್ಕೆ ನಟಿ ರೌಡಿಯಿಂದ ಹೊರಬಂದಿದ್ದಾರೆ.

  ಸಿನಿಮಾದ ಮೇಲೆ ಗಮನ

ರುಕ್ಮಿಣಿ ವಸಂತ್, ಜೂ ಎನ್​ಟಿಆರ್ ನಟನೆಯ ಹೊಸ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್.

ಜೂ ಎನ್​ಟಿಆರ್ ನಾಯಕಿ

ಶಾರುಖ್ ಖಾನ್ ಪುತ್ರಿಯ ಹೊಸ ಸಿನಿಮಾ, ನಿರ್ಮಾಣ ಅಪ್ಪನ ಗೆಳೆಯನದ್ದೇ