ಮಹಿಳೆಯರಲ್ಲಿ ಕಂಡುಬರುವ ಮುಖದ ಕೂದಲಿನ ಸಮಸ್ಯೆಗೆ ಶೇವಿಂಗ್ ಎಷ್ಟು ಸೂಕ್ತ
ಸಾಮಾನ್ಯವಾಗಿ ಮುಖದ ಕೂದಲನ್ನು ತೆಗೆದುಹಾಕಲು ಥ್ರೆಡ್ ಅಥವಾ ಫೇಶಿಯಲ್ ವ್ಯಾಕ್ಸ್ ಬಳಸಲಾಗುತ್ತದೆ.
ಆದರೆ ಶೇವಿಂಗ್ ಮೂಲಕ ಮುಖದ ಕೂದಲನ್ನು ತೆಗೆಯುವುದು ಒಂದು ಉತ್ತಮ ಆಯ್ಕೆಯಾಗಿದೆ.
ಈ ಶೇವಿಂಗ್ ವಿಧಾನವು ಥ್ರೆಡ್ ಅಥವಾ ಫೇಶಿಯಲ್ ವ್ಯಾಕ್ಸಿಂಗ್ ನಷ್ಟು ದುಬಾರಿಯೂ ಅಲ್ಲ.
ಇದು ಸತ್ತ ಚರ್ಮದ ಕೋಶವನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿದೆ.
ಆದರೆ ಈ ಶೇವಿಂಗ್ ವಿಧಾನ ಶುಷ್ಕ ಮತ್ತು ಸೂಕ್ಷ್ಮ ತ್ವಚೆಯ ಮೇಲೆ ಸಾಕಷ್ಟು ಕಿರಿಕಿರಿಯನ್ನುಂಟು ಮಾಡಬಹುದು.
ಆದ್ದರಿಂದ ನಿಮ್ಮ ಮುಖದ ಕೂದಲನ್ನು ತೆಗೆಯುವ ಮೊದಲು ನಿಮ್ಮ ತ್ವಚೆಯ ಬಗ್ಗೆ ಕಾಳಜಿವಹಿಸುವುದು ಅಗತ್ಯ.