ವಿವಿಧ ಬ್ಯಾಂಕುಗಳಲ್ಲಿರುವ ಎಫ್​ಡಿ ದರಗಳು

(Pic Credit: Google)

12 September 2023

ನಿಶ್ಚಿತ ಠೇವಣಿ

ಸಾಮಾನ್ಯ ಜನರ ಸಾಮಾನ್ಯ ಹೂಡಿಕೆ ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಒಂದು. ನಿಶ್ಚಿತ ಅವಧಿಗೆ ಇರಿಸುವ ಠೇವಣಿಗಳಿಗೆ ಬಡ್ಡಿ ಸಿಗುತ್ತದೆ.

(Pic Credit: Google)

ಎಷ್ಟಿದೆ ಬಡ್ಡಿದರ?

(Pic Credit: Google)

ಬೇರೆ ಬೇರೆ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಬೇರೆ ಬೇರೆ ಬಡ್ಡಿದರಗಳಿವೆ. ಪ್ರಮುಖ ಬ್ಯಾಂಕುಗಳಲ್ಲಿ ದರ ಎಷ್ಟೆಂಬ ವಿವರ ಮುಂದಿನ ಸ್ಲೈಡ್​ಗಳಲ್ಲಿ.

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕಿನಲ್ಲಿ ಶೇ. 3ರಿಂದ 7.10ರವರೆಗೂ ಎಫ್​ಡಿ ದರ ಇದೆ. ಒಂದು ವರ್ಷದ ಅವಧಿಯ ನಿಶ್ಚಿತ ಠೇವಣಿಗೆ ಬಡ್ಡಿದರ ಶೇ. 6.70 ಇದೆ.

(Pic Credit: Google)

ಎಚ್​ಡಿಎಫ್​ಸಿ ಬ್ಯಾಂಕ್

ಎಚ್​ಡಿಎಫ್​ಸಿ ಬ್ಯಾಂಕಿನಲ್ಲಿ ಎಫ್​ಡಿ ದರ ಶೇ. 3ರಿಂದ 7.25 ದರ ಇದೆ. ಒಂದು ವರ್ಷದ ಠೇವಣಿಗೆ ಶೇ. 7.10 ಬಡ್ಡಿ ಕೊಡಲಾಗುತ್ತದೆ.

(Pic Credit: Google)

ಎಸ್​ಬಿಐ ಬ್ಯಾಂಕ್

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದು ವರ್ಷದ ನಿಶ್ಚಿತ ಠೇವಣಿಗೆ ಶೇ. 6.80ರಷ್ಟು ಬಡ್ಡಿ ಸಿಗುತ್ತದೆ.

(Pic Credit: Google)

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕಿನಲ್ಲಿ ಶೇ. 4ರಿಂದ 7.40ರವರೆಗೆ ಎಫ್​ಡಿ ದರಗಳಿವೆ. ಒಂದು ವರ್ಷದ ಫಿಕ್ಸೆಡ್ ಡೆಪಾಸಿಟ್​ಗೆ ಬಡ್ಡಿದರ ಶೇ. 7.05 ಇದೆ.

(Pic Credit: Google)

ಕರ್ಣಾಟಕ ಬ್ಯಾಂಕ್

ಕರ್ಣಾಟಕ ಬ್ಯಾಂಕ್​ನಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಶೇ. 4.50 ರಿಂದ ಶೇ. 7.30ರ ಬಡ್ಡಿ ಇದೆ. ಒಂದು ವರ್ಷದ ಠೇವಣಿಗೆ ಶೇ. 7 ಬಡ್ಡಿ ಇದೆ.

(Pic Credit: Google)

ಹಿರಿಯ ನಾಗರಿಕರಿಗೆ

ಈ ಮೇಲಿನ ಬಡ್ಡಿದರಗಳು 2 ಕೋಟಿ ರೂ ಒಳಗಿನ ಠೇವಣಿಗಳಿಗೆ ನೀಡುವಂಥವು. ಹಿರಿಯ ನಾಗರಿಕರಿಗೆ 0.5 ಪ್ರತಿಶತದಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ.

(Pic Credit: Google)