ಈ ಆಹಾರಗಳನ್ನು ಎಂದಿಗೂ ನಿಮ್ಮ ಮಕ್ಕಳಿಗೆ ನೀಡಬೇಡಿ
ಕೆಲವೊಂದು ಆಹಾರಗಳನ್ನು ಮಕ್ಕಳಿಗೆ ನೀಡುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
ಕೇವಲ 5-10 ನಿಮಿಷಗಳಲ್ಲಿ ತಯಾರಿಸಬಹುದಾದ ನೂಡಲ್ಸ್ನಂತಹ ಆಹಾರಗಳನ್ನು ಎಂದಿಗೂ ಮಕ್ಕಳಿಗೆ ಕೊಡಬೇಡಿ.
ಪ್ಯಾಕ್ಡ್ ಪುಡ್ಗಳಲ್ಲಿ ಏನೇ ಧಾನ್ಯಗಳಿದ್ದರೂ ಕೂಡ ನಿಮ್ಮ ಮಕ್ಕಳಿಗೆ ಕೊಡುವುದನ್ನು ತಪ್ಪಿಸಿ. ಇದರಲ್ಲಿ ಕೃತಕ ಸಿಹಿಕಾರಕ ಬಳಸಲಾಗುತ್ತದೆ.
ಆಲೂಗಡ್ಡೆ ಚಿಪ್ಸ್ಗಳನ್ನು ಮಕ್ಕಳ ಬೆಳವಣೆಗೆಯ ಹಂತದಲ್ಲಿ ನೀಡುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
ಕ್ಯಾಂಡಿ ಮಕ್ಕಳ ನೆಚ್ಚಿನ ತಿಂಡಿ,ಆದರೆ ಇದರ ಸೇವನೆ ಸ್ಥೂಲಕಾಯತೆಗೆ ಕಾರಣವಾಗಬಹುದು.
ಹಣ್ಣಿನ ರಸ ಆರೋಗ್ಯಕರವೆಂದು ಪರಿಗಣಿಸಲಾದರೂ ಕೂಡ ಟೈಪ್ 2 ದಂತಹ ಮಧುಮೇಹಕ್ಕೆ ಕಾರಣವಾಗಬಹುದು.
ಸಂಸ್ಕರಿಸಿದ ಮಾಂಸಗಳು ತೂಕ ಹೆಚ್ಚಾಗಲು ಹಾಗೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.
ಮತ್ತಷ್ಟು ಓದಿ: