ಗಣೇಶ ಚತುರ್ಥಿಯಂದು ಭೇಟಿ ನೀಡಬಹುದಾದ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನಗಳು

25 Aug 2024

Ayesha Banu

ಈ ವರ್ಷ ಗಣೇಶ ಹಬ್ಬ ಸೆಪ್ಟೆಂಬರ್ 07ಕ್ಕೆ ಬಂದಿದೆ. ಗಣೇಶ ಹಬ್ಬದಂದು ಬೆಂಗಳೂರಿನಲ್ಲಿರುವ ಈ ಪ್ರಸಿದ್ಧ ಗಣೇಶ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಥಮ ಪೂಜಿತನ ಅನುಗ್ರಹ ಪಡೆದುಕೊಳ್ಳಿ.  

ಗಣೇಶ ಹಬ್ಬ 

ಬೆಂಗಳೂರಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಇದು ಒಂದು. ಇದು ಬಸವನಗುಡಿಯ ಬುಲ್ ಟೆಂಪಲ್ ರೋಡ್‍ನಲ್ಲಿದೆ. ಗಣೇಶ ಹಬ್ಬದಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ದೊಡ್ಡ ಗಣಪತಿ ದೇವಸ್ಥಾನ

ಮೈಸೂರು ರಸ್ತೆ, ಕೆಂಗೇರಿ ಸ್ಯಾಟಲೈಟ್ ಟೌನ್ ಬಳಿ ಪಂಚಮುಖಿ ಗಣೇಶ ದೇವಸ್ಥಾನ ಇದೆ. ಗಣೇಶ ಐದು ಮುಖಗಳನ್ನು ಹೊಂದಿದ್ದು, ನೀವು ಹಬ್ಬದಂದು ಇಲ್ಲಿಗೆ ಭೇಟಿ ನೀಡಬಹುದು.

ಪಂಚಮುಖಿ ಗಣೇಶ ದೇವಸ್ಥಾನ

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಈ ದೇವಸ್ಥಾನ ತುಂಬಾ ಫೇಮಸ್. ಇಲ್ಲಿ 108 ಗಣೇಶನ ಮೂರ್ತಿಗಳಿವೆ. ಹಬ್ಬದಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

108 ಗಣೇಶ ದೇವಸ್ಥಾನ

ಪದ್ಮನಾಭನಗರ ಬಳಿಯ ದೇವೇಗೌಡ ಪೆಟ್ರೋಲ್ ಬಂಕ್ ಪಕ್ಕದಲ್ಲೇ ಇರುವ ಶ್ರೀ ಭಾನು ತಿರುಮಲೆ ಬೆಟ್ಟದ ಮೇಲೆ ಬನಗಿರಿ ವರಸಿದ್ಧಿ ವಿನಾಯಕ ದೇವಾಲಯವಿದೆ. ಹಬ್ಬದಂದು ವಿಶೇಷ ಪೂಜೆಗಳಿರುತ್ತವೆ.

ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ

ಕೆಆರ್ ಪುರಂ ಮುಖ್ಯರಸ್ತೆಯಲ್ಲಿ ಇರುವ ಕಟ್ಟೆ ವಿನಾಯಕ ದೇವಾಲಯವು ತುಂಬಾ ಫೇಮಸ್. ಹಬ್ಬ ಹರಿದಿನಗಳಲ್ಲಿ ಸಾವಿರಾರು ಭಕ್ತರು ಗಣೇಶನ ದರ್ಶನಕ್ಕೆ ಇಲ್ಲಿ ಬರುತ್ತಾರೆ.

ಕಟ್ಟೆ ವಿನಾಯಕ ದೇವಸ್ಥಾನ

ಕೋರಮಂಗಲದಲ್ಲಿ 1979 ರಲ್ಲಿ ನಿರ್ಮಾಣವಾದ ಈ ದೇವಸ್ಥಾನವನ್ನು ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಎಂದೂ ಸಹ ಕರೆಯುತ್ತಾರೆ. ಐಟಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆಂದು ಇದಕ್ಕೆ ಈ ಹೆಸರು ಬಂದಿದೆ.

ಟೆಕ್ಕಿ ಗಣೇಶ ದೇವಸ್ಥಾನ

ಕಸ್ತೂರ್ಬಾ ರಸ್ತೆಯಲ್ಲಿರುವ ಟ್ರಾಫಿಕ್ ಗಣೇಶ ದೇವಾಲಯ 6 ಶತಮಾನಗಳಷ್ಟು ಹಳೆಯದು. ಅಪಘಾತಗಳು ಸಂಭವಿಸಬಾರದು ಎಂದು ಇಲ್ಲಿ ಹೊಸ ವಾಹನಗಳಿಗೆ ಪೂಜೆ ಮಾಡಿಸಲಾಗುತ್ತದೆ.  

ಅಪಘಾತ ಗಣೇಶ ದೇವಸ್ಥಾನ