ಚಂದ್ರಯಾನ ಉಡಾವಣೆ ಮಾದರಿ ಗಜಾನನ ಪ್ರತಿಷ್ಠಾಪನೆ

sep-20-2023

ಬಾಗಲಕೋಟೆಯ ಇಳಕಲ್ ನಗರದಲ್ಲಿ ಇಸ್ರೋದ ಚಂದ್ರಯಾನ ಉಡಾವಣೆ ಮಾದರಿ ಗಜಾನನ ಪ್ರತಿಷ್ಠಾಪನೆ ಮಾಡಲಾಗಿದೆ.

ಚಂದ್ರಯಾನ ಉಡಾವಣೆ ಮಾದರಿ ಗಜಾನನ ಪ್ರತಿಷ್ಠಾಪನೆ

ಈ ಮೂಲಕ ಚಂದ್ರನ ಅಂಗಳದಲ್ಲಿ ಹೊಸ ಮೈಲುಗಲ್ಲು ಸಾಧಿಸಿರುವ ಇಸ್ರೋಗೆ ಗೌರವ ಸೂಚಿಸಲಾಗಿದೆ.

ಇಸ್ರೋಗೆ ಗೌರವ 

ಇಳಕಲ್ ನಗರದ ವಿಜಯ ಮಹಾಂತೇಶ ನಗರದಲ್ಲಿ 'ಸೋಷಿಯುಥ್ ಅಸೋಸಿಯೇಷನ್" ತಂಡದ ಸದಸ್ಯರು ಡಿಫರೆಂಟ್ ಶೈಲಿಯಲ್ಲಿ ಗಣೇಶ ಕೂರಿಸಿದ್ದಾರೆ. 

ಡಿಫರೆಂಟ್ ಶೈಲಿ ಗಣೇಶ 

ಇಸ್ರೋ ಮಾದರಿಯನ್ನು ಗಣೇಶನ ಮುಂದೆ ನಿರ್ಮಾಣ ಮಾಡುವ ಮೂಲಕ ಇಸ್ರೋ ವಿಜ್ಞಾನಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಇಸ್ರೋ ಗಣೇಶ 

ಇಸ್ರೊ ಮಾದರಿಯನ್ನು ತಯಾರಿಸಿ ಅಲಂಕಾರ ಮಾಡಲು ಒಟ್ಟು ಮೂರು ದಿನಗಳ ಸಮಯವನ್ನು ತೆಗೆದುಕೊಂಡಿದ್ದಾರೆ. 

3 ದಿನಗಳ ಶ್ರಮ

ಗಣೇಶನ ಮಂಟಪದಲ್ಲಿ ರಾಕೆಟ್‌ ಮಾದರಿ ತಯಾರಿಸಿ ಇಸ್ರೋ ವಿಜ್ಞಾನಿಗಳಿಗೆ ಚಂದ್ರಯಾನ ಯಶಸ್ವಿಯಾಗಿರುವ ಬಗ್ಗೆ ಹಾಗೂ ಆದಿತ್ಯ L1 ಯಶಸ್ವಿ ಉಡಾವಣೆ ಬಗ್ಗೆ ಗೌರವ ಸಲ್ಲಿಸಿದ್ದಾರೆ.

ಚಂದ್ರಯಾನ ಗಣಪ

ಸೆಲ್ಯುಟ್ ಟು ಇಸ್ರೊ ಎಂಬ ಬರಹ ಬರೆದು ನಮನ ಸಲ್ಲಿಸಿದ್ದಾರೆ. ಈ ಸಂಸ್ಥೆಯಲ್ಲಿ ಸುಮಾರು 15 ಜನರಿದ್ದಾರೆ. 

ಸೆಲ್ಯುಟ್ ಟು ಇಸ್ರೊ 

ಆಯಾ ಕಾಲಕ್ಕೆ ತಕ್ಕಂತೆ ಪ್ರಚಲಿತ ಬೆಳವಣಿಗೆಗಳ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯವನ್ನು ಈ ತಂಡ ಮಾಡುತ್ತಿದೆ.

ಗಣಪತಿ ಬಪ್ಪ ಮೋರಿಯಾ

ಆರೋಗ್ಯಶಿಬಿರ, ರಕ್ತದಾನ ಆರೋಗ್ಯ ಶಿಬಿರದಂತಹ ಕೆಲಸಗಳನ್ನು ಕೂಡ ಈ ತಂಡ ಮಾಡುತ್ತಿದೆ. ಹತ್ತು ವರ್ಷದಿಂದ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದೆ. 

ತಂಡದಿಂದ ಜನ ಸೇವೆ

ಆದಿತ್ಯ L1 ಮಿಷನ್ ಉಡಾವಣೆ ನಂತರ ಏನೆಲ್ಲಾ ಆಗಿದೆ ಇಲ್ಲಿ ತಿಳಿಯಿರಿ