ಉಮಂಗ್ ಆ್ಯಪ್ ಮೂಲಕ ಪಿಎಫ್ ನಿರ್ವಹಿಸುವ ಕ್ರಮ

13 Aug 2024

Pic credit: Google

Vijayasarathy SN

ಕೇಂದ್ರ ಸರ್ಕಾರ ಆಧಾರ್, ಇಪಿಎಫ್, ಡಿಜಿಲಾಕರ್, ಪ್ಯಾನ್ ಇತ್ಯಾದಿ ಸೇವೆಯನ್ನು ಒದಗಿಸುತ್ತದೆ. ವಿವಿಧ ಸ್ಕೀಮ್​ಗಳನ್ನು ನಿರ್ವಹಿಸುತ್ತದೆ. ಇದೆಲ್ಲವನ್ನೂ ಒಂದೇ ಕಡೆ ಒದಗಿಸುತ್ತದೆ ಉಮಂಗ್ ಆ್ಯಪ್.

Pic credit: Google

ಕೇಂದ್ರ ಸರ್ಕಾರ ಆಧಾರ್, ಇಪಿಎಫ್, ಡಿಜಿಲಾಕರ್, ಪ್ಯಾನ್ ಇತ್ಯಾದಿ ಸೇವೆಯನ್ನು ಒದಗಿಸುತ್ತದೆ. ವಿವಿಧ ಸ್ಕೀಮ್​ಗಳನ್ನು ನಿರ್ವಹಿಸುತ್ತದೆ. ಇದೆಲ್ಲವನ್ನೂ ಒಂದೇ ಕಡೆ ಒದಗಿಸುತ್ತದೆ ಉಮಂಗ್ ಆ್ಯಪ್.

ಉಮಂಗ್ (Umang) ಮೊಬೈಲ್ ಆ್ಯಪ್ ರೂಪದಲ್ಲೂ ಮತ್ತು ವೆಬ್ ರೂಪದಲ್ಲೂ ಲಭ್ಯ ಇರುತ್ತದೆ. ಸರ್ಕಾರದ ನೂರಾರು ಸ್ಕೀಮ್​ಗಳನ್ನು ಈ ಆ್ಯಪ್​ನಲ್ಲಿ ಕಾಣಬಹುದು. ಪ್ಲೇಸ್ಟೋರ್​ನಲ್ಲಿ ಈ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಿ.

Pic credit: Google

ಉಮಂಗ್ ಆ್ಯಪ್​ನಲ್ಲಿ ಇಪಿಎಫ್ ಖಾತೆಯನ್ನು ನಿರ್ವಹಿಸುವ ಅವಕಾಶ ಇದೆ. ಇಪಿಎಫ್ ಖಾತೆಗಳಲ್ಲಿ ಹಣ ಎಷ್ಟಿದೆ ಎಂದು ನೋಡಬಹುದು. ಹಣ ವಿತ್​ಡ್ರಾ ಮಾಡಲೂ ಅವಕಾಶ ಇದೆ. ಅದರ ಕ್ರಮ ಮುಂದಿದೆ....

Pic credit: Google

ಉಮಂಗ್ ಆ್ಯಪ್ ಅನ್ನು ತೆರೆದು, ನಿಮ್ಮ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ. ಅಲ್ಲಿ ಸರ್ವಿಸಸ್ ಸೆಕ್ಷನ್ ಅಡಿಯಲ್ಲಿ ಕಾಣುವ ಇಪಿಎಫ್​ಒ ಅನ್ನು ಆಯ್ಕೆ ಮಾಡಿಕೊಳ್ಳಿ.

Pic credit: Google

ಬಳಿಕ, ಎಂಪ್ಲಾಯೀ ಸೆಂಟ್ರಿಕ್ ಸರ್ವಿಸಸ್ ಸೆಕ್ಷನ್​ಗೆ ಹೋಗಿ, ‘ರೈಸ್ ಕ್ಲೇಮ್’ ಕ್ಲಿಕ್ ಮಾಡಿ. ಯುಎಎನ್ ನಂಬರ್ ಹಾಕಿರಿ. ಮೊಬೈಲ್ ನಂಬರ್​ಗೆ ಬರುವ ಒಟಿಪಿಯನ್ನು ನಮೂದಿಸಿ.

Pic credit: Google

ಒಟಿಪಿ ಹಾಕಿದ ಬಳಿಕ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ವಿತ್​ಡ್ರಾ ಮಾಡುವ ಹಣದ ಮೊತ್ತ, ಇತ್ಯಾದಿ ಕೇಳಲಾಗುವ ಬೇರೆ ಮಾಹಿತಿಯನ್ನು ಭರ್ತಿ ಮಾಡಿ. ಇದಾದ ಬಳಿಕ ನಿಮಗೆ ರೆಫರೆನ್ಸ್ ಸಂಖ್ಯೆ ಸಿಗುತ್ತದೆ.

Pic credit: Google

ಇದು ಕ್ಲೇಮ್ ಮಾಡುವ ಕ್ರಮ. ಇದೇ ಆ್ಯಪ್​ನಲ್ಲಿ ನೀವು ಇಪಿಎಫ್​ಒ ಪಾಸ್​ಬುಕ್​ಗೆ ಹೋಗಿ ಅಲ್ಲಿ ನಿಮ್ಮ ಪಿಎಫ್ ಬ್ಯಾಲನ್ಸ್ ಎಲ್ಲವನ್ನೂ ಪರಿಶೀಲಿಸಬಹುದು. ನಾಮಿನಿಗಳ ಅಪ್​ಡೇಟ್ ಇತ್ಯಾದಿ ಕಾರ್ಯಗಳನ್ನು ಮಾಡಬಹುದು. 

Pic credit: Google